Saturday, June 6, 2026
Homeಕೊಡಗುಕೊಡಗು: ಸ್ನಾನ ಮಾಡುತ್ತಿದ್ದ ವೃದ್ದೆ ಮೇಲೆ ಕುಸಿದ ಮನೆಯ ಗೋಡೆ: ಮದೆನಾಡು ಸಮೀಪ‌ ಮಳೆಯಿಂದಾಗಿ ಉಬ್ಬಿದ...

ಕೊಡಗು: ಸ್ನಾನ ಮಾಡುತ್ತಿದ್ದ ವೃದ್ದೆ ಮೇಲೆ ಕುಸಿದ ಮನೆಯ ಗೋಡೆ: ಮದೆನಾಡು ಸಮೀಪ‌ ಮಳೆಯಿಂದಾಗಿ ಉಬ್ಬಿದ ರಾಷ್ಟ್ರೀಯ ಹೆದ್ದಾರಿ

- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಅವಘಡ ಸಂಭವಿಸಿದೆ.

ಸ್ನಾನ ಮಾಡುತ್ತಿದ್ದ ವೃದ್ಧೆಯ ಮೇಲೆ ಮನೆಯ ಗೋಡೆ ಬಿದ್ದ ಪರಿಣಾಮ ವಸಂತಮ್ಮ‌(65) ಗಂಭೀರ ಗಾಯಗೊಂಡಿದ್ದಾರೆ.

ಸೋಮವಾರಪೇಟೆ ತಾಲೂಕಿನ ಸುಳುಗಳಲೆ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ವಸಂತಮ್ಮ ಅವರ ಕಾಲು, ಮುಖ ಹಾಗೂ ಕಣ್ಣಿಗೆ ತೀವ್ರ ಗಾಯಗಳಾಗಿದೆ.

ಗಾಯಾಳು ವಸಂತಮ್ಮ ಅವರನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೇ ವೇಳೆ ಭಾರೀ ಮಳೆಯ ಪರಿಣಾಮವಾಗಿ ಮಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ
ಅಪಾಯಕಾರಿಯಾಗಿ ಉಬ್ಬಿ ಬರುತ್ತಿದೆ.

ಮಡಿಕೇರಿ ತಾಲೂಕಿನ ಮದೆನಾಡು ಬಳಿ ಬೆಟ್ಟದ ಮೇಲಿನಿಂದ ಮಣ್ಣಿನ‌ ಒತ್ತಡ ಹೆಚ್ಚಾಗಿ ರಸ್ತೆ ಉಬ್ಬುತ್ತಿದೆ.

ರಸ್ತೆ ಉಬ್ಬುತ್ತಿರುವ ಸ್ಥಳಕ್ಜೆ ಎನ್ ಡಿಆರ್ ಎಫ್ ತಂಡ‌ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

- Advertisement -

Latest News

error: Content is protected !!