Thursday, July 3, 2025
Homeತಾಜಾ ಸುದ್ದಿದೇವೇಗೌಡರು 'ನಾಲ್ಕರ ಮೇಲೆ ಹೋಗೋದು' ಹತ್ತಿರದಲ್ಲೇ ಇದೆ: ವಿವಾದಾತ್ಮಕ ಹೇಳಿಕೆ ಮೂಲಕ ನಾಲಗೆ ಹರಿಬಿಟ್ಟ ಕೆ.ಎನ್....

ದೇವೇಗೌಡರು ‘ನಾಲ್ಕರ ಮೇಲೆ ಹೋಗೋದು’ ಹತ್ತಿರದಲ್ಲೇ ಇದೆ: ವಿವಾದಾತ್ಮಕ ಹೇಳಿಕೆ ಮೂಲಕ ನಾಲಗೆ ಹರಿಬಿಟ್ಟ ಕೆ.ಎನ್. ರಾಜಣ್ಣ..!

spot_img
- Advertisement -
- Advertisement -

ತುಮಕೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ವಿರುದ್ಧ ತುಮಕೂರಿನ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಕೆ. ಎನ್. ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇವೇಗೌಡರು ಈಗ ಇಬ್ಬರ ಹೆಗಲ ಮೇಲೆ ಕೈ ಹಾಕಿ ನಡೆಯುತ್ತಿದ್ದಾರೆ. ಇನ್ನು ನಾಲ್ವರ ಮೇಲೆ ಹೋಗುವ ಸಮಯ ಹತ್ತಿರದಲ್ಲೇ ಇದೆ ಎಂದು ಕಾಂಗ್ರೆಸ್ ನಾಯಕ ಕೆ. ಎನ್. ರಾಜಣ್ಣ ಲೇವಡಿ ಮಾಡಿದ್ದಾರೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕಾವಣದಾಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಶಾಸಕ ಕೆ. ಎನ್. ರಾಜಣ್ಣ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೆ. ಎನ್. ರಾಜಣ್ಣ, ಇದು ನನ್ನ‌ ಕೊನೆಯ ಚುನಾವಣೆ. ಶೋಕಿಗೆ, ಮುಖಸ್ತುತಿಗೆ ರಾಜಕಾರಣ ಮಾಡೋದು ಬೇಡ. ನಾನು ಎಂಎಲ್ಎ ಆದ್ರೆ ನೀವೆಲ್ಲಾ ಎಂಎಲ್ಎ ಇದ್ದಂಗೆ. ನೀವು ಹೋರಾಟ ಮಾಡಿ ನಾನು ಎಂಎಲ್ಎ ಆದ್ರೆ ನಾನು ಸುಮ್ಮನೆ ನಾಮಕಾವಸ್ಥೆಗೆ ಇರ್ತೀನಿ. ಏನಾದ್ರೂ ಕೆಲಸ ಆಗಬೇಕಾದ್ರೆ ನೀವೇ ಅಧಿಕಾರಿಗಳನ್ನ ಕೇಳೋ ಶಕ್ತಿ ನಿಮಗೆ ಬರುತ್ತೆ ಎಂದು ಕೆ. ಎನ್. ರಾಜಣ್ಣ ಹೇಳಿದರು.

- Advertisement -
spot_img

Latest News

error: Content is protected !!