Thursday, June 4, 2026
Homeಕರಾವಳಿಸುಳ್ಯದ ಅಲೆಟ್ಟಿಯಲ್ಲಿ ಕೃಷಿ ತೋಟಕ್ಕೆ ದಾಳಿ ನಡೆಸಿದ ಕಾಡಾನೆಗಳ ಹಿಂಡು; 75 ತೆಂಗಿನ ಮರ, 50...

ಸುಳ್ಯದ ಅಲೆಟ್ಟಿಯಲ್ಲಿ ಕೃಷಿ ತೋಟಕ್ಕೆ ದಾಳಿ ನಡೆಸಿದ ಕಾಡಾನೆಗಳ ಹಿಂಡು; 75 ತೆಂಗಿನ ಮರ, 50 ಬಾಳೆಗಿಡ ಸೇರಿದಂತೆ ಲಕ್ಷಾಂತರ ರೂ. ನಷ್ಟ

- Advertisement -
- Advertisement -
ಅಲೆಟ್ಟಿ: ತಡರಾತ್ರಿ ಕಾಡಾನೆಗಳ ಹಿಂಡು ಕೃಷಿ ತೋಟಕ್ಕೆ ದಾಳಿ ನಡೆಸಿದ ಘಟನೆಯು ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮೈಂದೂರು ನಿವಾಸಿ ವಿಶ್ವನಾಥ ಗೌಡ ಎಂಬವರ ಕೃಷಿ ತೋಟಕ್ಕೆ ತಡರಾತ್ರಿಯಲ್ಲಿ ಕಾಡಾನೆಗಳ ಹಿಂಡು ದಾಳಿ
ನಡೆಸಿದ್ದು, ಅಪಾರ ಪ್ರಮಾಣದ ಕೃಷಿ ನಾಶ ಮಾಡಿದ ಘಟನೆ ವರದಿಯಾಗಿದೆ. ಆನೆ ಹಿಂಡಿನ ದಾಳಿಯಿಂದಾಗಿ ಸುಮಾರು 75 ತೆಂಗಿನ ಮರ, 50 ಬಾಳೆಗಿಡ ಹಾಗೂ ಹತ್ತು ಅಡಿಕೆ ಮರಗಳನ್ನು ನಾಶಪಡಿಸಿದಲ್ಲದೇ ತೋಟಕ್ಕೆ ಅಳವಡಿಸಲಾಗಿದ್ದ ನೀರಿನ ಪೈಪ್ ನ್ನು ಕೂಡಾ ಪುಡಿಗಟ್ಟಿದ ಪರಿಣಾಮವಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

- Advertisement -

Latest News

error: Content is protected !!