Wednesday, June 3, 2026
Homeತಾಜಾ ಸುದ್ದಿವಿಟ್ಲ: ಚೂರಿ ಇರಿತಕ್ಕೆ ಒಳಗಾದ ಮಹಿಳೆ ಸಾವು

ವಿಟ್ಲ: ಚೂರಿ ಇರಿತಕ್ಕೆ ಒಳಗಾದ ಮಹಿಳೆ ಸಾವು

- Advertisement -
- Advertisement -

ವಿಟ್ಲ: ಮಹಿಳೆಯ ಮೇಲೆ ಯುವಕನೊಬ್ಬ ಚೂರಿ ಇರಿದು ಹಲ್ಲೆ ಮಾಡಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಸಾವನ್ನಪ್ಪಿರೋದಾಗಿ ತಿಳಿದುಬಂದಿದೆ. ವಿಟ್ಲದ ಅನಂತಾಡಿಯ ಜನಪ್ರಿಯ ಗಾಡರ್ನ್ ಬಳಿ ಈ ಘಟನೆ ನಡೆದಿದೆ.

ಅನಂತಾಡಿ ದೇವಿನಗರ ನಿವಾಸಿ ಶಕುಂತಲಾ ಮೃತಪಟ್ಟವರು. ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು  ಬಂಟ್ವಾಳ ಆಸ್ಪತ್ರೆಗೆ ಕರೆದೊಯ್ಯುವಾಗ ಆಂಬುಲೆನ್ಸ್‌ ನಲ್ಲೇ ಸಾವನ್ನಪ್ಪಿದ್ದಾರೆ. ಇದೀಗ ಬಂಟ್ವಾಳ ಸರ್ಕಾರೀ ಆಸ್ಪತ್ರೆಯಲ್ಲಿ ಮೃತದೇಹವಿದ್ದು, ಪೊಲೀಸರು ಶವಪರೀಕ್ಷೆಗೆ ಮಂಗಳೂರು ದೇರಳಕಟ್ಟೆಗೆ ಮೃತದೇಹ ತೆಗೆದುಕೊಂಡು ಹೋಗಲಿದ್ದಾರೆ.

ಶಕುಂತಲಾ ಸ್ವಂತ ಹೊಟೇಲ್‌ ಉದ್ಯಮ ನಡೆಸುತ್ತಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದಾರೆ. ಚೂರಿ ಇರಿತಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ.

- Advertisement -

Latest News

error: Content is protected !!