Thursday, June 4, 2026
Homeಕರಾವಳಿಉಡುಪಿಕಾಪು: ಮೀನುಗಾರರಿಗೆ ಗಿಲ್‌ ನೆಟ್‌ ಬೋಟ್‌ ಹಸ್ತಾಂತರಿಸಿದ ಶಾಸಕ

ಕಾಪು: ಮೀನುಗಾರರಿಗೆ ಗಿಲ್‌ ನೆಟ್‌ ಬೋಟ್‌ ಹಸ್ತಾಂತರಿಸಿದ ಶಾಸಕ

- Advertisement -
- Advertisement -

ಕಾಪು: ಮೀನುಗಾರಿಕಾ ಇಲಾಖೆಯ ರಾಜ್ಯ ವಲಯ ಯೋಜನೆಯಡಿ 2021-22ನೇ ಸಾಲಿನ ಕಾಪು ತಾಲೂಕಿನ ಮೂವರು ಫಲಾನುಭವಿಗಳಿಗೆ ಎಫ್.ಆರ್.ಪಿ ದೋಣಿ, ಇಂಜಿನ್, ಬಲೆ ಸಹಿತ ಸಲಕರಣೆಗಳನ್ನು ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಹಸ್ತಾಂತರಿಸಿದರು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಶಿಫಾರಸ್ಸಿನ ಮೇರೆಗೆ ತಲಾ ರೂ. 3,60,000/- ರಂತೆ ಒಟ್ಟು ರೂ. 10,80,000/- ವೆಚ್ಚದಲ್ಲಿ ಮೂರು ಎಫ್.ಆರ್.ಪಿ ದೋಣಿ, ಇಂಜಿನ್, ಬಲೆ, ಸಲಕರಣೆ, ಲೈಪ್ ಬಾಯ್, ಲೈಫ್ ಜಾಕೆಟ್ ಹಾಗೂ ಐಸ್ ಬಾಕ್ಸ್ ಗಳು ಮಂಜೂರಾಗಿದ್ದವು. ಇದನ್ನು ಅರ್ಹ ಫಲಾನುಭವಿಗಳಾದ ಗೋಪಾಲ ಕಾಪು ಪಡು, ಶ್ರೀ ರತ್ನಾಕರ ಸ್ವಾಮಿಲ್ ತೋಟ ಕಾಪು ಪಡು, ಶಮಿತ್ ಕೈಪುಂಜಾಲು ಅವರುಗಳಿಗೆ ಗಿಲ್ ನೆಟ್ ಬೋಟ್ ಗಳನ್ನು ವಿತರಿಸಲಾಯಿತು.

- Advertisement -

Latest News

error: Content is protected !!