Tuesday, June 9, 2026
Homeಕರಾವಳಿಉಡುಪಿನಿಟ್ಟೆ ಮತ್ರು ಹೆಬ್ರಿ ಗ್ರಾಮ ಪಂಚಾಯತ್ ಗಳಿಗೆ ಅರುಣಾಚಲ ಪ್ರದೇಶ ರಾಜ್ಯದ ನಿಯೋಗ ಭೇಟಿ

ನಿಟ್ಟೆ ಮತ್ರು ಹೆಬ್ರಿ ಗ್ರಾಮ ಪಂಚಾಯತ್ ಗಳಿಗೆ ಅರುಣಾಚಲ ಪ್ರದೇಶ ರಾಜ್ಯದ ನಿಯೋಗ ಭೇಟಿ

- Advertisement -
- Advertisement -

ಉಡುಪಿ: ಅರುಣಾಚಲ ಪ್ರದೇಶ ರಾಜ್ಯದ ನಿಯೋಗ ಕಾರ್ಕಳ ತಾಲೂಕಿಗೆ ಭೇಟಿ ನೀಡಿದೆ‌.

ಅರುಣಾಚಲ ಪ್ರದೇಶದ ಪಂಚಾಯತ್ ರಾಜ್ ನ ತ್ರಿಸ್ತರ ವ್ಯವಸ್ಥೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿಯೋಗ ಕಾರ್ಕಳ ತಾಲೂಕಿನ ಎರಡು ಗ್ರಾಮ ಪಂಚಾಯತ್ ಗಳಿಗೆ ಭೇಟಿ ನೀಡಿದೆ.

ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಂ.ಆರ್.ಎಫ್ ಕಾರ್ಯಾವೈಖರಿಯ ಬಗ್ಗೆ ಹಾಗೂ ಹೆಬ್ರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಸಂಕೀರ್ಣ, ನರ್ಸರಿ ತೋಟ ವೀಕ್ಷಣೆ ಮತ್ತು ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನದ ಮಾಹಿತಿಯನ್ನು ಪಡೆದುಕೊಂಡಿದೆ.

ಅಲ್ಲದೇ ಅರುಣಾಚಲ ಪ್ರದೇಶ ರಾಜ್ಯದಲ್ಲಿ ಇವುಗಳ ಅನುಸರಣೆ ಮತ್ತು ಅನುಕರಣೆ ಮಾಡಲು ಸಾಧಕ ಮತ್ತು ಬಾಧಕಗಳ ಬಗ್ಗೆ ನಡೆದ ಸಂವಾದದಲ್ಲಿ ನಿಯೋಗದ ಸದಸ್ಯರು ಭಾಗವಹಿಸಿದ್ದರು.

ಕಾರ್ಕಳ ತಾಲೂಕಿನ ಅಧಿಕಾರಿಗಳು ಈ ವೇಳೆ ಹಾಜರಿದ್ದು ಅರುಣಾಚಲ ಪ್ರದೇಶ ರಾಜ್ಯದ ನಿಯೋಗಕ್ಕೆ ಮಾಹಿತಿ ನೀಡಿದರು‌.

- Advertisement -

Latest News

error: Content is protected !!