Friday, June 5, 2026
Homeಕರಾವಳಿಉಡುಪಿಉಡುಪಿ: ಶೇಂದಿ ತೆಗೆಯುವಾಗ ತೆಂಗಿನ ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು

ಉಡುಪಿ: ಶೇಂದಿ ತೆಗೆಯುವಾಗ ತೆಂಗಿನ ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು

- Advertisement -
- Advertisement -

ಉಡುಪಿ: ಶೇಂದಿ ತೆಗೆಯಲು ತೆಂಗಿನ ಮರಕ್ಕೆ ಹತ್ತಿದ್ದ ವೇಳೆ ಮರದಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕಾಪುವಿನ ಉಳಿಯಾರಗೋಳಿ ಎಂಬಲ್ಲಿ ನಡೆದಿದೆ.

ಉಳಿಯಾರಗೋಳಿ ಗ್ರಾಮದ ತಾಳಿ ನೋಡಿ ನಿವಾಸಿ ವಿನೋದರ ಸನಿಲ್ (55) ಮೃತ ದುರ್ದೈವಿ. ಜೂನ್  4 ರಂದು ವಿನೋದರ ಅವರು ಶೇಂದಿ ತೆಗೆಯಲು ತೆಂಗಿನಮರಕ್ಕೆ ಹತ್ತಿದ್ದರು. ಈ ವೇಳೆ ತೆಂಗಿನ ಕೊಂಬನ್ನು ಕತ್ತಿಯಿಂದ ಕತ್ತರಿಸುವಾಗ ಕತ್ತಿ ಮಣಿಗಂಟಿಗೆ ತಾಗಿ ಗಾಯವಾಗಿ ಅವರು ಮರದಿಂದ ಕೆಳಗೆ ಬಿದ್ದಿದ್ದಾರೆ.ಬಳಿಕ ಅವರನ್ನು ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಅವರ ಕೈಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿತ್ತು.

ಆದರೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಾರದ ಹಿನ್ನೆಲೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!