Saturday, June 13, 2026
Homeಕರಾವಳಿಮಂಗಳೂರು: ನಗರದಲ್ಲಿ‌ ಮತ್ತೆ ಕಾಣಿಸಿಕೊಂಡ ಎರಡು ಕಾಡುಕೋಣಗಳು

ಮಂಗಳೂರು: ನಗರದಲ್ಲಿ‌ ಮತ್ತೆ ಕಾಣಿಸಿಕೊಂಡ ಎರಡು ಕಾಡುಕೋಣಗಳು

- Advertisement -
- Advertisement -

ಮಂಗಳೂರು:  ನಗರದಲ್ಲಿ ಮತ್ತೆ ಎರಡು ಕಾಡುಕೋಣಗಳು ಕಾಣಿಸಿಕೊಂಡಿವೆ. ಇಲ್ಲಿನ ಮರೋಳಿ ಬಳಿಯ ತಾತಾವು ಬಳಿ ನಿನ್ನೆ ಬೆಳಗ್ಗೆ ಎರಡು ಕಾಡುಕೋಣಗಳು ಕಾಣಿಸಿಕೊಂಡಿವೆ.

ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಕಾರ್ಯಾಚರಣೆ ನಡೆಸಿದರೂ ಅವುಗಳನ್ನು ಸೆರೆ ಹಿಡಿಯಲು ಸಾಧ್ಯವಾಗಿಲ್ಲ.

ಮಂಗಳವಾರ ಬೆಳಗ್ಗಿನ ವೇಳೆ ಕಾಡುಕೋಣ ನೋಡಿದ ಪರಿಸರದ ಮಂದಿ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಕೆಲವು‌ ದಿನಗಳ‌ ಹಿಂದೆನಗರದ ರಸ್ತೆಯಲ್ಲಿ‌ ಇದೇ ರೀತಿ ಕಾಡುಕೋಣ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.

- Advertisement -

Latest News

error: Content is protected !!