Sunday, June 7, 2026
Homeತಾಜಾ ಸುದ್ದಿಮಂಗಳೂರು: ಮಂಜನಾಡಿ ಸಮೀಪ ಹತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ

ಮಂಗಳೂರು: ಮಂಜನಾಡಿ ಸಮೀಪ ಹತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ

- Advertisement -
- Advertisement -

ಮಂಗಳೂರು: ಮಂಜನಾಡಿ ಸಮೀಪದ ತೌಡುಗೋಳಿ ಕ್ರಾಸ್ ನಲ್ಲಿರುವ ʼಕಾಟನ್ ಇಂಡಸ್ಟ್ರೀಸ್ʼ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ.  ಇಂದು  ಸಂಜೆ ಬೆಂಕಿ ಅನಾಹುತ ಸಂಭವಿಸಿದ್ದು ಭಾರೀ ಪ್ರಮಾಣದ ನಷ್ಟ ಉಂಟಾಗಿದೆ ಎನ್ನಲಾಗಿದೆ.

ದೇರಳಕಟ್ಟೆ ನೋಮನ್ ಎಂಬವರಿಗೆ ಸೇರಿದ  ಹತ್ತಿಯ ಪ್ಯಾಕ್ಟರಿ ಇದಾಗಿದ್ದು,  ಘಟನೆ ನಡೆದ ವೇಳೆ ಸುಮಾರು ನಾಲ್ಕು ಜನ ಸಿಬ್ಬಂದಿ ಒಳಗಿದ್ದರು ಎನ್ನಲಾಗಿದೆ.  ಬೆಂಕಿ ಕಾಣಿಸಿಕೊಂಡ ಕೂಡಲೇ ಹೊರಗೆ ಓಡಿ ಬಂದು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ.  ಘಟನೆಯಿಂದಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎನ್ನಲಾಗಿದೆ.

- Advertisement -

Latest News

error: Content is protected !!