Wednesday, June 3, 2026
Homeಕರಾವಳಿಮಂಗಳೂರು: ಮನೆಯಹ ಹಿಂಭಾಗ ಶೆಡ್ ನಲ್ಲಿ ನಿಲ್ಲಿಸಿದ್ದ ಕಾರಿನಿಂದ ಮೊಬೈಲ್ ಹಾಗೂ ಪರ್ಸ್ ಕಳವು

ಮಂಗಳೂರು: ಮನೆಯಹ ಹಿಂಭಾಗ ಶೆಡ್ ನಲ್ಲಿ ನಿಲ್ಲಿಸಿದ್ದ ಕಾರಿನಿಂದ ಮೊಬೈಲ್ ಹಾಗೂ ಪರ್ಸ್ ಕಳವು

- Advertisement -
- Advertisement -

ಮಂಗಳೂರು:: ಮನೆ ಹಿಂಭಾಗದ ಶೆಡ್ಡ್ ನಲ್ಲಿ ನಿಲ್ಲಿಸಿದ್ದ ಕಾರಿನಿಂದ ಬೆಲೆಬಾಳುವ ಮೊಬೈಲ್ ಮತ್ತು ಪರ್ಸ್ ಕಳ್ಳತನ ಮಾಡಿರುವ ಘಟನೆ ಹಳೆಯಂಗಡಿಯಲ್ಲಿ ನಡೆದಿದೆ.

ಹಳೆಯಂಗಡಿಯ ಹರಿಭಟ್ ರಸ್ತೆ ನಿವಾಸಿ ಅನ್ವರ್‌ ಎಂಬವರ ಕಾರಿನಲ್ಲಿ ಕಳ್ಳತನ ನಡೆದಿದೆ. ಘಟನೆ ಭಾನುವಾರ ಮಧ್ಯಾಹ್ನ ನಡೆದಿದ್ದು, ಇಂದು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಬೆಳಕಿಗೆ ಬಂದಿದೆ.

ಅನ್ವರ್ ಭಾನುವಾರ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಿದ್ದ ವೇಳೆ ಕಾರನ್ನು ಮನೆಯ ಹಿಂಭಾಗದಲ್ಲಿರುವ ಶೆಡ್ಡಿನಲ್ಲಿ ನಿಲ್ಲಿಸಿದ್ದರು. ಈ ವೇಳೆ ಸಂಶುದ್ದೀನ್ ಎಂಬಾತ ಕಳ್ಳತನ ನಡೆಸಿರುವುದಾಗಿ ಅನ್ವರ್ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಅನ್ವರ್ ಅವರು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!