Friday, July 4, 2025
Homeತಾಜಾ ಸುದ್ದಿಮೈಸೂರು ಯದುವಂಶಸ್ಥರಿಂದ ಮೋದಿಗೆ ರಾಜಾಥಿತ್ಯ; ದಕ್ಷಿಣ ಭಾರತದ ತಿಂಡಿ ಸೇರಿದಂತೆ ಉಪ್ಪಿಟ್ಟು, ಇಡ್ಲಿ, ಅವಲಕ್ಕಿ...

ಮೈಸೂರು ಯದುವಂಶಸ್ಥರಿಂದ ಮೋದಿಗೆ ರಾಜಾಥಿತ್ಯ; ದಕ್ಷಿಣ ಭಾರತದ ತಿಂಡಿ ಸೇರಿದಂತೆ ಉಪ್ಪಿಟ್ಟು, ಇಡ್ಲಿ, ಅವಲಕ್ಕಿ ಉಪಾಹಾರ

spot_img
- Advertisement -
- Advertisement -

ಮೈಸೂರು: ಯೋಗ ದಿನದ ಪ್ರಯುಕ್ತ ಮಂಗಳವಾರದಂದು ಅರಮನೆ ಆವರಣದ ಮೈದಾನದಲ್ಲಿ ಏರ್ಪಡಿಸಿದ್ದ ಯೋಗಾಭ್ಯಾಸದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮೈಸೂರು ಅರಮನೆ ಒಳಗೆ ಯದುವಂಶಸ್ಥರು ರಾಜಾಥಿತ್ಯ ನೀಡಿದರು.

ಮೋದಿ ಅರಮನೆಯ ರಾಜ ವಂಶಸ್ತರ ಜೊತೆಗೇ ಉಪಾಹಾರ ಸೇವಿಸಿದ್ದು, ವಿಶಾಲವಾದ ಡೈನಿಂಗ್ ಟೇಬಲ್ ನಲ್ಲಿ ಬೆಳ್ಳಿ ತಟ್ಟೆಯಲ್ಲಿ ನರೇಂದ್ರ ಮೋದಿ ಅವರಿಗೆ ಉಪಹಾರ ನೀಡಲಾಯಿತು. ದಕ್ಷಿಣ ಭಾರತದ ತಿಂಡಿ ತಿನಿಸು ಸೇರಿದಂತೆ ಉಪ್ಪಿಟ್ಟು, ಅವಲಕ್ಕಿ ಇಡ್ಲಿ ಸಾಂಬಾರ್, ಚಟ್ಟಿ, ಮಿಕ್ಸ್ ಫೂಟ್, ಬ್ರೆಡ್ ಬಟರ್, ಮೈಸೂರು ಪಾಕ್ ಅನ್ನು ಮೈಸೂರು ರಾಜವಂಶಸ್ಥರ ಪರವಾಗಿ ಸಿದ್ಧಪಡಿಸಲಾಗಿತ್ತು. ಇನ್ನೂ ಮೈಸೂರಿಗೆ ಬಂದ ವೇಳೆ ಅರಮನೆಗೆ ಬರುವಂತೆ ಮೋದಿಗೆ ಪ್ರಮೋದ ದೇವಿ ಒಡೆಯರ್ ಆಹ್ವಾನ ನೀಡಿದ್ದಾರೆ.

ಮೋದಿಯೊಂದಿಗೆ ಉಪಾಹಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲಟ್ ಸಾಥ್ ನೀಡಿದರು. ನಂತರದಲ್ಲಿ ಮೈಸೂರು ಅರಮನೆಗೆ ಒಂದು ಸುತ್ತು ಹಾಕಿ ಒಳಾಂಗಣವನ್ನು ವೀಕ್ಷಣೆ ಮಾಡಿದ ನರೇಂದ್ರ ಮೋದಿ, ಅರಮನೆ ಸೌಂದರ್ಯಕ್ಕೆ ಮಾರುಹೋಗಿ ಭೇಷ್ ಎಂದಿದ್ದಾರೆ ಎಂದು ತಿಳಿದುಬಂದಿದೆ.

- Advertisement -
spot_img

Latest News

error: Content is protected !!