- Advertisement -
- Advertisement -
ನವದೆಹಲಿ, ಮೇ 20: ಭಾರತ ದೇಶದಲ್ಲಿ ಮಾರಕ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ.ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ದಾಖಲೆಯ 5611 ಹೊಸ ಪ್ರಕರಣಗಳು ದೃಢ ಪಟ್ಟಿವೆಮತ್ತು 140 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ . ಈ ಮೂಲಕ ಒಟ್ಟಾರೆ ಭಾರತದಲ್ಲಿ ಕೊವಿಡ್ ಪ್ರಕರಣ ಸಂಖ್ಯೆ 106750ಕ್ಕೆ ಜಿಗಿದಿದೆ.
ಪ್ರಸ್ತುತ ದೇಶದಲ್ಲಿ 61149 ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಆಸ್ಪತ್ರೆ ಹಾಗೂ ಕೊವಿಡ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ 3303 ಜನರು ಕೊರೊನಾಗೆ ಬಲಿಯಾಗಿದ್ದಾರೆ.
- Advertisement -