Friday, June 5, 2026
Homeತಾಜಾ ಸುದ್ದಿನಾಳೆ ಬೆಳಗ್ಗೆ 11.30ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆ ; ವೆಬ್ ಸೈಟ್ ಮೂಲಕವೂ ಫಲಿತಾಂಶ...

ನಾಳೆ ಬೆಳಗ್ಗೆ 11.30ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆ ; ವೆಬ್ ಸೈಟ್ ಮೂಲಕವೂ ಫಲಿತಾಂಶ ವೀಕ್ಷಣೆಗೆ ಅವಕಾಶ

- Advertisement -
- Advertisement -

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ನಾಳೆ ಬೆಳಗ್ಗೆ 11.30 ಕ್ಕೆ ಪ್ರಕಟವಾಗಲಿದೆ.

ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ‌ನಾಳೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಲಿದ್ದಾರೆ.

ಇದಲ್ಲದೇ www.karresults.nic.in ವೆಬ್ ಸೈಟ್ ನಲ್ಲಿ ಕೂಡಾ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದಾಗಿದೆ.

ಏಪ್ರಿಲ್ 22 ರಿಂದ ಮೇ 18 ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಾದ್ಯಂತ ಸುಮಾರು 6 ಲಕ್ಷದ 80 ಸಾವಿರದಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ‌

- Advertisement -

Latest News

error: Content is protected !!