Wednesday, June 24, 2026
Homeತಾಜಾ ಸುದ್ದಿಕೆಲಸ ಕಳೆದುಕೊಂಡು ಅತ್ರಂತ ಸ್ಥಿತಿ ತಲುಪಿದ ಟಿವಿ ಆಂಕರ್ : ಬೀದಿ ಬದಿ ಸಮೋಸ ವ್ಯಾಪಾರೇ...

ಕೆಲಸ ಕಳೆದುಕೊಂಡು ಅತ್ರಂತ ಸ್ಥಿತಿ ತಲುಪಿದ ಟಿವಿ ಆಂಕರ್ : ಬೀದಿ ಬದಿ ಸಮೋಸ ವ್ಯಾಪಾರೇ ಈಗ ಜೀವನಾಧಾರ

- Advertisement -
- Advertisement -

ನ್ಯೂಸ್ ಡೆಸ್ಕ್  :  ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಹಿಡಿದ ಬಳಿಕ ಕೆಲಸ‌ ಕಳೆದುಕೊ‌ಡು ಟಿವಿ ಆಂಕರ್ ಒಬ್ಬರು ಬೀದಿ ಬದಿ‌ ಆಹಾರ ಮಾರಾಟ ಮಾಡುತ್ತಿದ್ದಾರೆ.

ಟಿವಿ ಆಂಕರ್ ಬೀದಿಯಲ್ಲಿ ಸಮೋಸ ಮಾರಾಟ ಮಾಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ಕಬೀರ್ ಹಕ್ಮಲ್ ಅವರು ತಮ್ಮ ಟ್ವಿಟ್ಟರ್ ನಲ್ಲಿ, ಈ ಹಿಂದೆ ಮಾಧ್ಯಮ ನಿರೂಪಕರಾಗಿದ್ದ ಮೂಸಾ ಮೊಹಮ್ಮದಿ ಅವರ ಜೀವನೋಪಾಯಕ್ಕಾಗಿ ಆಹಾರವನ್ನು ಮಾರಾಟ ಮಾಡುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಫೋಟೋವನ್ನು ಹಂಚಿಕೊಂಡ ಹಕ್ಮಲ್, ಮೂಸಾ ಮೊಹಮ್ಮದಿ ಅವರು ವಿವಿಧ ಟಿವಿ ಚಾನೆಲ್‌ಗಳಲ್ಲಿ ಆಂಕರ್ ಮತ್ತು ವರದಿಗಾರರಾಗಿ ವರ್ಷಗಳ ಕಾಲ ಕೆಲಸ ಮಾಡಿದರು. ಈಗ ಅವರ ಕುಟುಂಬವನ್ನು ಪೋಷಿಸಲು ಯಾವುದೇ ಆದಾಯವಿಲ್ಲ. ಮತ್ತು ಸ್ವಲ್ಪ ಹಣವನ್ನು ಗಳಿಸಲು ಬೀದಿ ಆಹಾರವನ್ನು ಮಾರಾಟ ಮಾಡುತ್ತಾರೆ ಎಂದು ಬರೆದಿದ್ದಾರೆ.

ವೈರಲ್ ಫೋಟೋ ಬಳಿಕ ರಾಷ್ಟ್ರೀಯ ರೇಡಿಯೋ ಮತ್ತು ದೂರದರ್ಶನದ ಮಹಾನಿರ್ದೇಶಕ ಅಹ್ಮದುಲ್ಲಾ ವಾಸಿಕ್ ಅವರು ತಮ್ಮ ಇಲಾಖೆಯಲ್ಲಿ ಮಾಜಿ ಟಿವಿ ನಿರೂಪಕ ಮತ್ತು ವರದಿಗಾರರನ್ನು ನೇಮಿಸುವುದಾಗಿ ಟ್ವೀಟ್ ಮಾಡಿದ್ದಾರೆ.

- Advertisement -

Latest News

error: Content is protected !!