Wednesday, June 3, 2026
Homeತಾಜಾ ಸುದ್ದಿಬೆಂಗಳೂರು ಸಿಟಿ ರೌಂಡ್ಸ್ ಮಧ್ಯೆ ಮಸಾಲೆ ದೋಸೆ ತಿನ್ನಲು ಹೋದ ಸಿಎಂ!

ಬೆಂಗಳೂರು ಸಿಟಿ ರೌಂಡ್ಸ್ ಮಧ್ಯೆ ಮಸಾಲೆ ದೋಸೆ ತಿನ್ನಲು ಹೋದ ಸಿಎಂ!

- Advertisement -
- Advertisement -

ಬೆಂಗಳೂರು: ಇಂದು ಬೆಂಗಳೂರು ಸಿಟಿ ರೌಂಡ್ಸ್ ಹಾಕಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೌಂಡ್ಸ್ ಮಧ್ಯೆಯೇ ದೋಸೆ ತಿನ್ನಲು ಹೋಗಿದ್ದಾರೆ.

ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಸಿಎಂ ವಿದ್ಯಾರ್ಥಿ ಭವನಕ್ಕೆ ತೆರಳಿ ದೋಸೆ ತಿಂದಿದ್ದಾರೆ.ಗಾಂಧಿ ಬಜಾರ್ ನಲ್ಲಿರುವ ವಿದ್ಯಾರ್ಥಿ ಭವನ ಹೋಟೆಲ್ ಗೆ ತೆರಳಿದ್ದ ಸಿಎಂ ಬೊಮ್ಮಾಯಿ ಮಸಾಲೆ ದೋಸೆ ಸವಿದಿದ್ದಾರೆ.

ಈ ವೇಳೆ ಸಿಎಂ ಜೊತೆ ಸಚಿವ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ ಗರುಡಾಚಾರ್ ಮತ್ತು ಎಎಪಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಕೂಡಾ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದ್ದರು.

- Advertisement -

Latest News

error: Content is protected !!