Saturday, June 6, 2026
Homeಕರಾವಳಿಮಳಲಿ ಮಸೀದಿ ವಿವಾದ ಪ್ರಕರಣ: ತೀರ್ಪು ಕಾಯ್ದಿರಿಸಿದ ಮಂಗಳೂರು ಕೋರ್ಟ್

ಮಳಲಿ ಮಸೀದಿ ವಿವಾದ ಪ್ರಕರಣ: ತೀರ್ಪು ಕಾಯ್ದಿರಿಸಿದ ಮಂಗಳೂರು ಕೋರ್ಟ್

- Advertisement -
- Advertisement -

ಮಂಗಳೂರು: ಮಳಲಿ‌ ಮಸೀದಿ ಮತ್ತು ವಿಶ್ವ ಹಿಂದೂ ಪರಿಷತ್ ಅರ್ಜಿ ವಿಚಾರಣೆ ಕುರಿತ ನಿರ್ಧಾರವನ್ನು ಮಂಗಳೂರು ಕೋರ್ಟ್ ಕಾಯ್ದಿರಿಸಿದೆ.

ಅರ್ಜಿ ಬಗ್ಗೆ ಯಾವುದೇ ಆದೇಶ ಪಾಸ್ ಮಾಡದಂತೆ ಹೈಕೋರ್ಟ್ ಸೂಚನೆ ಹಿನ್ನಲೆಯಲ್ಲಿ ಮಂಗಳೂರು ಮೂರನೇ ಸಿವಿಲ್ ಕೋರ್ಟ್ ನಿರ್ಧಾರ ಕಾಯ್ದಿರಿಸಿದೆ‌.

ಹೈಕೋರ್ಟ್ ಸೂಚನೆಯನ್ನು ಮಂಗಳೂರಿನ 3ನೇ ಸಿವಿಲ್ ಕೋರ್ಟ್ ಗಮನಕ್ಕೆ ವಿಶ್ವ ಹಿಂದೂ ಪರಿಷತ್ ಪರ ವಕೀಲರು ತಂದರು.

ಅರ್ಜಿಗಳ ವಿಚಾರಣೆ ನಡೆಸಬಹುದು ಎಂಬುದನ್ನು ಕೋರ್ಟ್ ಹೇಳಿದೆ, ಹೀಗಾಗಿ ಅರ್ಜಿ ವಿಚಾರಣೆ ನಡೆಸುವಂತೆ ಮಸೀದಿ‌ ಪರ ವಕೀಲರು‌ ಮನವಿ ಮಾಡಿದರು.

ಅರ್ಜಿಗಳ ವಿಚಾರಣೆಗೆ ಕೋರ್ಟ್ ಸೂಚನೆ ನೀಡಿದ ಬಳಿಕ
ಎರಡು ಕಡೆಯ ವಕೀಲರಿಂದಲೂ ವಾದ ಮಂಡನೆ ನಡೆಯಿತು.

ನವೀಕರಣದ ಸಂದರ್ಭ ಕಂಡು ಬಂದ ಸ್ಮಾರಕವನ್ನು ಸಂರಕ್ಷಣೆ ಮಾಡುವಂತೆ‌ ವಿಶ್ವ ಹಿಂದೂ ಪರಿಷತ್ ಪರ ವಕೀಲರು ಮನವಿ ಮಾಡಿದರು.

ಹೈಕೋರ್ಟ್ ಜೂನ್ 17 ರಂದು ನೀಡುವ ತೀರ್ಪುಗೆ ಅನುಗುಣವಾಗಿ ಮಂಗಳೂರಿನ 3ನೇ ಸಿವಿಲ್ ಕೋರ್ಟ್ ನಿರ್ಧಾರ ಕಾಯ್ದಿರಿಸಿದೆ.

- Advertisement -

Latest News

error: Content is protected !!