Thursday, June 4, 2026
Homeಕರಾವಳಿಉಡುಪಿಕರಾವಳಿ ಜಿಲ್ಲೆಗಳಲ್ಲಿ ಕೋವಿಡ್‌ 4 ನೇ ಅಲೆ ಮುನ್ನೆಚ್ಚರಿಕೆ; ಪೀಡಿಯಾಟ್ರಿಕ್‌ ಸರ್ವೇ ಕಾರ್ಯ ಪೂರ್ಣ

ಕರಾವಳಿ ಜಿಲ್ಲೆಗಳಲ್ಲಿ ಕೋವಿಡ್‌ 4 ನೇ ಅಲೆ ಮುನ್ನೆಚ್ಚರಿಕೆ; ಪೀಡಿಯಾಟ್ರಿಕ್‌ ಸರ್ವೇ ಕಾರ್ಯ ಪೂರ್ಣ

- Advertisement -
- Advertisement -

ಉಡುಪಿ/ಮಂಗಳೂರು: ರಾಜ್ಯದಲ್ಲಿ ಕೊರೊನಾ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಲಸಿಕೆ ಪಡೆಯುವ ಗುಂಪು ಅಂದರೆ 4ರಿಂದ 6 ವರ್ಷದೊಳಗಿನ ಮಕ್ಕಳ ಬಗ್ಗೆ ಗಮನ ವಹಿಸುವಂತೆ ರಾಜ್ಯ ಕೋವಿಡ್ ತಾಂತ್ರಿಕ ಸಲಹ ಸಮಿತಿ ಸಲಹೆ ನೀಡಿದ್ದು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದರ ಸರ್ವೇ ಕಾರ್ಯ ಪೂರ್ಣಗೊಂಡಿದೆ.

ಈಗಾಗಲೇ ಕಾನ್ಸುರ ಐಐಟಿ ಜೂನ್, ಜುಲೈ ತಿಂಗಳಲ್ಲಿ ನಾಲ್ಕನೇ ಅಲೆಯ ಸಾಧ್ಯತೆಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ. ಮೂರನೇ ಅಲೆಯು ಲಸಿಕೆ ಪಡೆಯದವರನ್ನು ಹೆಚ್ಚಾಗಿ ಬಾಧಿಸಿದ್ದು, ಲಸಿಕೆ ಪಡೆದವರಲ್ಲಿ ಕೊರೊನಾ ಸೋಂಕು ರಹಿತ ಹಾಗೂ ಸೌಮ್ಯ ಲಕ್ಷಣಗಳು ಕಂಡುಬಂದಿತ್ತು. ಇದರ ಹೊರತಾಗಿ ಯಾವುದೇ ತೀವ್ರ ತರಹದ ಅನಾರೋಗ್ಯ ಸಮಸ್ಯೆ ಲಸಿಕೆ ಪಡೆದವರಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ 0-12 ವರ್ಷದೊಳಗಿನ ಮಕ್ಕಳಿಗೆ ಈ ಬಾರಿ ಲಸಿಕೆ ಆಗದಿರುವುದರಿಂದ ಸೋಂಕು ಕಾಡಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು.

ರಾಜ್ಯಾದ್ಯಂತ ಸರ್ವೇ ರಾಜ್ಯದಲ್ಲಿನ 5,000 ಮಕ್ಕಳನ್ನು ಬ್ಯಾಂಡಮ್ ಆಗಿ ಪೀಡಿಯಾಟ್ರಿಕ್ ಸರ್ವೇ ನಡೆಸುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಆರೋಗ್ಯ ಇಲಾಖೆಗೆ ಸಲಹೆ ನೀಡಿದ್ದಾರೆ. ಅದರಂತೆ ಉಡುಪಿ ಜಿಲ್ಲೆಗೆ 78 ಹಾಗೂ ದ.ಕ. ಜಿಲ್ಲೆಗೆ 144 ಗುರಿ ನಿಗದಿ ಮಾಡಲಾಗಿತ್ತು. ಈ ಸರ್ವೇ ಮೂಲಕ ಮಕ್ಕಳ ಆರೋಗ್ಯ ಸ್ಥಿತಿಗತಿ ಅಧ್ಯಯನವಾಗಲಿದೆ.

- Advertisement -

Latest News

error: Content is protected !!