Saturday, August 29, 2026
Homeತಾಜಾ ಸುದ್ದಿಮನೆಯಲ್ಲಿ ಪ್ರಧಾನಿ ಮೋದಿ ಮರದ ಪ್ರತಿಮೆ ಸ್ಥಾಪಿಸಿದ ಬಿಜೆಪಿ ಮುಖಂಡ

ಮನೆಯಲ್ಲಿ ಪ್ರಧಾನಿ ಮೋದಿ ಮರದ ಪ್ರತಿಮೆ ಸ್ಥಾಪಿಸಿದ ಬಿಜೆಪಿ ಮುಖಂಡ

- Advertisement -
- Advertisement -

ಬೆಂಗಳೂರು: ಬಿಜೆಪಿ ಮುಖಂಡರೊಬ್ಬರು ತಮ್ಮ ಹೊಸ ಮನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ.

ಬೆಂಗಳೂರಿನ ಬಿಜೆಪಿ ಮುಖ‌ಂಡ ರಾಘವೇಂದ್ರ ಶೆಟ್ಟಿ ನಿವಾಸದಲ್ಲಿ ಮೋದಿ ಮರದ ಪ್ರತಿಮೆ ನಿರ್ಮಾಣ ಮಾಡಿಸಿದ್ದಾರೆ.

ಶಿವಾನಿ ಮರದಲ್ಲಿ ಕೆತ್ತಲಾಗಿರುವ ನರೇಂದ್ರ ಮೋದಿ ಪ್ರತಿಮೆಯನ್ನು ರಾಘವೇಂದ್ರ ಶೆಟ್ಟಿ ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿರುವ ಮನೆಯಲ್ಲಿ ಸ್ಥಾಪಿಸಿದ್ದಾರೆ.

ಆರು ಅಡಿ ಎತ್ತರದ ಪ್ರತಿಮೆಯನ್ನು ಸುಮಾರು ಎಂಟು ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರತಿಮೆ ಸ್ಥಾಪನೆ ಮಾಡಲಾಗಿದೆ.

ಅಲ್ಲದೇ, ರಾಘವೇಂದ್ರ ಶೆಟ್ಟಿ ಮನೆಯಲ್ಲಿ ಅಂಬೇಡ್ಕರ್, ಶಿವಾಜಿ, ರಾಜ್ ಕುಮಾರ್ ಸೇರಿದಂತೆ ಸುಮಾರು ಹನ್ನೆರಡು ಮರದಿಂದ ನಿರ್ಮಿಸಿರುವ ಪ್ರತಿಮೆಗಳನ್ನು ಸ್ಥಾಪನೆ ಮಾಡಲಾಗಿದೆ.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾಗಿರುವ ರಾಘವೇಂದ್ರ ಶೆಟ್ಟಿ ಫೈನಾನ್ಸ್ ಉದ್ಯಮಿಯಾಗಿದ್ದು, ಮೂಲತಃ ಉಡುಪಿ ಜಿಲ್ಲೆಯ ಮುದ್ರಾಡಿಯವರಾಗಿದ್ದಾರೆ.

- Advertisement -

Latest News

error: Content is protected !!