Thursday, June 4, 2026
Homeಕರಾವಳಿಉಡುಪಿಕಾರ್ಕಳ: ಕಾಂಗ್ರೆಸ್‌ ಪಕ್ಷಕ್ಕೆ ಎಂದೂ ಸೋಲಿಲ್ಲ: ಕಾರ್ಕಳದಲ್ಲಿ ಕಾಂಗ್ರೆಸ್‌ನ ಗೆದ್ದೇ ಗೆಲ್ಲಿಸ್ತೀವಿ: ವೀರಪ್ಪ ಮೊಯ್ಲಿ ಶಪಥ

ಕಾರ್ಕಳ: ಕಾಂಗ್ರೆಸ್‌ ಪಕ್ಷಕ್ಕೆ ಎಂದೂ ಸೋಲಿಲ್ಲ: ಕಾರ್ಕಳದಲ್ಲಿ ಕಾಂಗ್ರೆಸ್‌ನ ಗೆದ್ದೇ ಗೆಲ್ಲಿಸ್ತೀವಿ: ವೀರಪ್ಪ ಮೊಯ್ಲಿ ಶಪಥ

- Advertisement -
- Advertisement -

ಕಾರ್ಕಳ: ಜಾತಿ, ಮತಗಳ ಧ್ರುವೀಕರಣ ಬಿಜೆಪಿ ಸಂಸ್ಕೃತಿ. ಕಾಂಗ್ರೆಸ್ ಧರ್ಮ, ಪಕ್ಷ ಎಲ್ಲವನ್ನೂ ಮೀರಿದ ಪಕ್ಷ. ಜಾತಿಯ ಸಮೀಕರಣ ಆಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಎಂದೂ ಸೋಲಿಲ್ಲ. ಎಲ್ಲ ಗೋಡೆಗಳನ್ನು ಕೆದಕಿ ಭ್ರಮೆ ಹೋಗಲಾಡಿಸುವ ರೀತಿಯಲ್ಲಿ ಕರಾವಳಿ ಸಹಿತ ರಾಜ್ಯದಲ್ಲಿ ಪಕ್ಷ ಸಂಘಟಿಸುವ ಕಾರ್ಯ ನಡೆಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಡಾ| ವೀರಪ್ಪ ಮೊಯ್ಲಿ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ಪ್ರತಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲಿದ್ದೇನೆ. ಅವಿಭಜಿತ ಜಿಲ್ಲೆಗಳಲ್ಲಿ ಅಗಸ್ಟ್ ತಿಂಗಳಿನಿಂದ ಪ್ರವಾಸ ಕೈಗೊಳ್ಳುವೆ ಮಾತ್ರವಲ್ಲದೇ ಸಕ್ರಿಯವಾಗಿ ಪಕ್ಷ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವೆ ಎಂದರು.

ಹೆಬ್ರಿ ತಾಲೂಕು, ಕಚೇರಿ ಕಾಂಗ್ರೆಸ್ ಸರಕಾರದ ಸಾಧನೆ. ಹೆಬ್ರಿ ತಾಲೂಕು ರಚನೆಗೆ 10 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿತ್ತು. ಆದರೆ ಹೆಬ್ರಿ ತಾಲೂಕು ಕಟ್ಟಡ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿಲ್ಲ. ಸಚಿವ ಸುನಿಲ್ ಕಾರ್ಕಳ ಉತ್ಸವಕ್ಕೆ ಆಮಂತ್ರಣ ನೀಡಿದರು. ಉದ್ಘಾಟನೆ ವೇಳೆ ಮರೆತು ಬಿಟ್ಟರು. ಜನರ ಭಾವನೆಗೆ ಸುನಿಲ್ ತಿಲಾಂಜಲಿ ಇಟ್ಟರು ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಕಾರ್ಕಳ ಕ್ಷೇತ್ರದಿಂದ ಆರು ಬಾರಿ ಗೆಲುವು ಸಾಧಿಸಿ ಮುಖ್ಯಮಂತ್ರಿ ಸ್ಥಾನ ಪಡೆದ ತನ್ನನ್ನು ಕ್ಷೇತ್ರದ ಜನತೆ ಆಶೀರ್ವದಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾರ್ಕಳದಲ್ಲಿ ಎಂಎಲ್‌ ಎ ಗೆದ್ದು ಬರುವಂತೆ ಸಂಘಟನೆ ಮಾಡುವೆ. ಇದು ಬರೀ ಭರವಸೆಯಲ್ಲ ಶಪಥ ಅಂತ ಮೊಯ್ಲಿ ಹೇಳಿದ್ರು.

- Advertisement -

Latest News

error: Content is protected !!