Wednesday, June 3, 2026
Homeತಾಜಾ ಸುದ್ದಿಮಲಯಾಳಂ ಚಿತ್ರರಂಗಕ್ಕೂ ಹೊಂಬಾಳೆ ಫಿಲ್ಮ್ಸ್ ಗ್ರ್ಯಾಂಡ್‌ ಎಂಟ್ರಿ: ನಟ ಪೃಥ್ವಿರಾಜ್‌ ಜೊತೆ ಹೊಸ ಸಿನಿಮಾ ಘೋಷಣೆ

ಮಲಯಾಳಂ ಚಿತ್ರರಂಗಕ್ಕೂ ಹೊಂಬಾಳೆ ಫಿಲ್ಮ್ಸ್ ಗ್ರ್ಯಾಂಡ್‌ ಎಂಟ್ರಿ: ನಟ ಪೃಥ್ವಿರಾಜ್‌ ಜೊತೆ ಹೊಸ ಸಿನಿಮಾ ಘೋಷಣೆ

- Advertisement -
- Advertisement -

ಕೆಜಿಎಫ್‌ನಲ್ಲಿ ಒಂದಲ್ಲ ಅಂತ ಎರಡು ಬಾರಿ ಬಂಗಾರದ ಗಣಿ ಶೋಧಿಸಿದ್ದ ಹೊಂಬಾಳೆ ಫಿಲ್ಮ್ಸ್‌ ಈಗ ಕೇರಳದತ್ತ ದೃಷ್ಟಿ ನೆಟ್ಟಿದೆ. ಹೌದು, ಹೊಂಬಾಳೆ ಫಿಲ್ಮ್ಸ್‌ ಈಗ ಮಲಯಾಳಂ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಮಲಯಾಳಂ ಖ್ಯಾತ ನಟ, ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್  ಅವರ ನಾಯಕತ್ವದಲ್ಲಿ ಹೊಂಬಾಳೆಯ ಚೊಚ್ಚಲ ಮಲಯಾಳಂ ಸಿನಿಮಾ ಮೂಡಿ ಬರಲಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಮಲಯಾಳಂ, ಕನ್ನಡ, ತಮಿಳು, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಅಂದಹಾಗೆ ಈ ಚಿತ್ರಕ್ಕೆ ‘ಟೈಸನ್’ ಅಂತ ಹೆಸರಿಡಲಾಗಿದೆ.  

ಕೆಜಿಎಫ್‌ ಹಾಗೂ ಕೆಜಿಎಫ್‌ ಚಾಪ್ಟರ್ 2 ಸಿನಿಮಾಗಳ ಮೂಲಕ ಭಾರತೀಯ ಸಿನಿರಂಗದಲ್ಲಿ ಸುನಾಮಿ ಎಬ್ಬಿಸಿದ ಹೊಂಬಾಳೆ ಫಿಲ್ಮ್ಸ್ ಈಗ ಮಲಯಾಳಂ ಸಿನಿಮಾ ನಿರ್ಮಾಣಕ್ಕೂ ಮುಂದಾಗಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಮಲಯಾಳಂ ಸಿನಿಮಾ ನಿರ್ಮಿಸಲಿದ್ದಾರೆ.

ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸುಕುಮಾರ್ ನಾಯಕರಾಗಲಿದ್ದು, ಇದಕ್ಕೆ ಟೈಸನ್ ಅಂತ ಹೆಸರಿಡಲಾಗಿದೆ. ಟೈಸನ್ ಆಕ್ಷನ್-ಪ್ಯಾಕ್ಡ್ ಸೋಶಿಯೋ ಥ್ರಿಲ್ಲರ್ ಆಗಿದ್ದು, ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಲಿದ್ದಾರೆ ಮತ್ತು ಮುರಳಿ ಗೋಪಿ ಚಿತ್ರಕಥೆ ಮಾಡಿದ್ದಾರಂತೆ. ಈ ಸಿನಿಮಾ 2023ರ ಮಾರ್ಚ್ ವೇಳೆಗೆ ರಿಲೀಸ್ ಆಗಲಿದೆ.

- Advertisement -

Latest News

error: Content is protected !!