Wednesday, June 3, 2026
Homeತಾಜಾ ಸುದ್ದಿಮಂಗಳೂರು: 777 ಚಾರ್ಲಿ ಸಿನಿಮಾದಿಂದ ಸ್ಫೂರ್ತಿ: ಶ್ವಾನದಳದ ನಾಯಿಗೆ ಚಾರ್ಲಿ ಹೆಸರು ನಾಮಕರಣ

ಮಂಗಳೂರು: 777 ಚಾರ್ಲಿ ಸಿನಿಮಾದಿಂದ ಸ್ಫೂರ್ತಿ: ಶ್ವಾನದಳದ ನಾಯಿಗೆ ಚಾರ್ಲಿ ಹೆಸರು ನಾಮಕರಣ

- Advertisement -
- Advertisement -

ಮಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಬಿಡುಗಡೆಯಾಗುವ ಮೊದಲಿನಿಂದಲೂ ಒಂದೆಲ್ಲಾ ಒಂದು ವಿಚಾರಕ್ಕೆ ಸುದ್ದಿ ಮಾಡಿತ್ತು. ಇದೀಗ ಚಾರ್ಲಿ ಸಿನಿಮಾದಿಂದ ಸ್ಫೂರ್ತಿ ಪಡೆದು ಶ್ವಾನದಳದ ನಾಯಿಗೆ ಚಾರ್ಲಿ ಹೆಸರು ನಾಮಕರಣ ಮಾಡಲಾಗಿದೆ. ಮಂಗಳೂರಿನಲ್ಲಿ ಚಾರ್ಲಿ ಸಿನಿಮಾ ನೋಡಿ ಈ ರೀತಿ ಮಾಡಲಾಗಿದ್ದು, ಶ್ವಾನದಳದ ಲ್ಯಾಬ್ರೋಡರ್ ರಿಟ್ರಿವರ್ ತಳಿಯ ನಾಯಿಗೆ ಚಾರ್ಲಿ ಹೆಸರು ಇಡಲಾಗಿದೆ.

ಹೌದು, ಮೂರು ತಿಂಗಳ ಶ್ವಾನ ದಳದ ಲ್ಯಾಬ್ರೋಡರ್ ನಾಯಿಗೆ ಈ ಹೆಸರು ಇಡಲಾಗಿದ್ದು, ನಾಯಿಗೆ ಅದ್ಧೂರಿಯಾಗಿ ಚಾರ್ಲಿ ಎಂಬ ಹೆಸರು ನಾಮಕರಣ ಮಾಡಲಾಗಿದೆ. ಇದು ನಿಜಕ್ಕೂ ವಿಶೇಷವಾಗಿದ್ದು, ನಾಯಿಗೆ ಕೇಕ್ ತಿನ್ನಿಸಿ ಚಾರ್ಲಿ ಹೆಸರು ನಾಮಕರಣ ಮಾಡಿರುವುದು ಸುದ್ದಿಯಾಗಿದೆ. ಸದ್ಯ ಈ ನಾಯಿ ತರಬೇತಿ ಪಡೆಯುತ್ತಿದ್ದು, ತರಬೇತಿ ಬಳಿಕ ಬಾಂಬ್ ನಿಷ್ಕ್ರಿಯ ದಳ ಸೇರಲಿದೆ ಎಂಬ ಮಾಹಿತಿ ಇದೆ.

ರಕ್ಷಿತ್ ಶೆಟ್ಟಿ ಅಭಿನಯದ, ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಸಿನಿಮಾ ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದು, ಚಾರ್ಲಿ ನೋಡೋಕೆ ಜನಸಾಗರ ಹರಿದು ಬಂದಿದೆ. ಬೆಳಗ್ಗೆ ಕೆಜಿ ರಸ್ತೆಯ ತ್ರಿವೇಣಿ ಚಿತ್ರಮಂದಿರದಲ್ಲಿ ಜನಸಾಗರ ಸೇರಿದ್ದು, ಫಸ್ಟ್ ಸೇ ಫಸ್ಟ್ ಶೋನಲ್ಲಿ ಚಾರ್ಲಿ ನೋಡೋಕೆ ಬಹಳಷ್ಟು ಮಂದಿ ಬಂದಿದ್ದು, ಚಿತ್ರ ನೋಡಿ ಇಷ್ಟಪಟ್ಟಿದ್ದಾರೆ. ಇನ್ನು ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಜೊತೆ ಚಿತ್ರತಂಡ ಸಿನಿಮಾ ನೋಡಿದ್ದು, ರಾಜ್ ಬಿ ಶೆಟ್ಟಿ, ನಾಯಕಿ ಸಂಗೀತ ಶೃಂಗೇರಿ, ಸಂಗೀತ ನಿರ್ದೇಶಕ ನಬೀಲ್ ಪೌಲ್ ತ್ರಿವೇಣಿ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

- Advertisement -

Latest News

error: Content is protected !!