Tuesday, May 7, 2024
Homeಕರಾವಳಿಉಡುಪಿಕಾರ್ಕಳ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜನೆ

ಕಾರ್ಕಳ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜನೆ

spot_img
- Advertisement -
- Advertisement -

ಕಾರ್ಕಳ: ಕಾರ್ಕಳದ ಎಂಪಿಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಎಂಸಿ ರಕ್ತನಿಧಿ ಘಟಕ ಮಣಿಪಾಲ ,  ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ , ಕಾಲೇಜಿನ ಐಕ್ಯೂಎಸಿ, ವಿದ್ಯಾರ್ಥಿ ವೇದಿಕೆ , ಎನ್ .ಎಸ್. ಎಸ್.,  ರೆಡ್ ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ ಇಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು  .

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜಪುರ ಸಾರಸ್ವತ ಸೊಸೈಟಿ ಕಾರ್ಕಳ ಇದರ ಅಧ್ಯಕ್ಷರಾದ ರವೀಂದ್ರ ಪ್ರಭು ಕಡಾರಿ ಮಾತನಾಡಿ, ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ ಮತ್ತು ಜನರು ಹೆಚ್ಚು ರಕ್ತದಾನದಲ್ಲಿ ಪಾಲ್ಗೊಳ್ಳುವುದು ಅವಶ್ಯಕವಾಗಿದೆ ಎಂದರು.

ನಂತರ ಅಭಯಹಸ್ತ ಚಾರಿಟಬಲ್ ಟ್ರಸ್ಟ್ ಉಡುಪಿ ಇಲ್ಲಿನ ಅಧ್ಯಕ್ಷರಾದ ಸತೀಶ್ ಸಾಲಿಯಾನ್ ಮಾತನಾಡಿ, ಉಡುಪಿ ಜಿಲ್ಲೆಯ ರಕ್ತದಾನದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯಾಗಿದೆ. ಆದರೂ ರಕ್ತ ತುಂಬಾ ಅವಶ್ಯಕವಾಗಿ ಬೇಡಿಕೆಯಲ್ಲಿರುವ ದಿನಗಳಲ್ಲಿ ಇಂತಹ ಈ ಕಾರ್ಯಕ್ರಮದ ಆಯೋಜನೆ ಅಗತ್ಯ ಎಂದರು.

ನಂತರದಲ್ಲಿ ರಕ್ತನಿಧಿ ಘಟಕ ಕೆಎಂಸಿ ಆಸ್ಪತ್ರೆ ಮಣಿಪಾಲ ಇಲ್ಲಿನ ವೈದ್ಯಾಧಿಕಾರಿಗಳಾದ ಬೆಮ್ಮ  ಇವರು ರಕ್ತದಾನದ ಮಹತ್ವ ಮತ್ತು ರಕ್ತದಾನ ಮಾಡಲು ಇರಬೇಕಾದ ಆರೋಗ್ಯದ ಸ್ಥಿತಿ ಬಗ್ಗೆ ಮಾಹಿತಿ ನೀಡಿದರು.ಈ ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ ದೇವದಾಸ್ ಪಾಟ್ಕರ್ ಇವರು ಮಾತನಾಡಿ ರಕ್ತದಾನದಿಂದ ನಮ್ಮ ಆರೋಗ್ಯ ಒಳ್ಳೆಯದಾಗುತ್ತದೆ ಮತ್ತು ಮತ್ತೊಬ್ಬರ ಜೀವ ಉಳಿಸಲು ಒಂದು ಅವಕಾಶ ದೊರೆಯುತ್ತದೆ ಎಂಬ ಚೈತನ್ಯದಾಯಕ ನುಡಿಗಳನ್ನಾಡಿದರು. ಇದಾದ ಬಳಿಕ ಅಧ್ಯಕ್ಷೀಯ ನುಡಿಗಳಲ್ಲಿ ಪ್ರಾಂಶುಪಾಲರು ಇಂತಹ ರಕ್ತದಾನ ಶಿಬಿರವನ್ನು ನಮ್ಮ ಕಾಲೇಜು ಅನೇಕ ವರ್ಷಗಳಿಂದ ನಡೆಸುತ್ತ ಬಂದಿದೆ.  ಮಾನವನ ಅಮೂಲ್ಯ ಸಂಪತ್ತು ರಕ್ತವಾಗಿದ್ದು, ಇನ್ನೊಂದು ಜೀವವನ್ನು ಉಳಿಸುವ ಶಕ್ತಿ ನಮಗಿದೆ ಎಂದರು. ಹಾಗೂ ರಕ್ತದಾನದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಹುರಿದುಂಬಿಸಿದರು.

- Advertisement -
spot_img

Latest News

error: Content is protected !!