Monday, June 15, 2026
Homeಅಪರಾಧಧರ್ಮಸ್ಥಳ: ಕುಡಿದು ಬಂದ ಮಗನಿಂದ ತಂದೆ ಮೇಲೆ ಹಲ್ಲೆ ಆರೋಪ; ಮನೆ ಬಿಟ್ಟು ಹೋಗದಿದ್ದರೆ...

ಧರ್ಮಸ್ಥಳ: ಕುಡಿದು ಬಂದ ಮಗನಿಂದ ತಂದೆ ಮೇಲೆ ಹಲ್ಲೆ ಆರೋಪ; ಮನೆ ಬಿಟ್ಟು ಹೋಗದಿದ್ದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದ ಮಗ

- Advertisement -
- Advertisement -

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಮಾಲು ಪದಾರ್ಥ ಸೇವಿಸಿ ಬಂದ ವ್ಯಕ್ತಿಯೋರ್ವ ತನ್ನ ತಂದೆ ಬೈದು ಹಲ್ಲೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.


ಪುದುಬೆಟ್ಟು ಗ್ರಾಮದ ಸುಕುಮಾರ ಎಂಬವರು ದೂರು ನೀಡಿದ್ದು, ನನ್ನ ಮಗ ರಜೀಶ್ (40) ಎಂಬವನು ವಿಪರೀತ ಅಮಲು ಪದಾರ್ಥ ಸೇವಿಸಿಕೊಂಡು ಸಂಜೆ ಬಂದು ನನ್ನನ್ನು ಉದ್ದೇಶಿಸಿ ನೀನು ಮನೆ ಬಿಟ್ಟು ಹೋಗಬೇಕು ಇಲ್ಲದಿದ್ದರೆ ನಿನ್ನನ್ನು ಕೊಲ್ಲದೇ ಗೆ ಬಿಡುವುದಿಲ್ಲ ಎಂದು ಹೇಳಿ ಅವ್ಯಾಚ ಶಬ್ದಗಳಿಂದ ಬೈದು ಅಂಗಳದ ಬದಿಯಲ್ಲಿ ರಬ್ಬರ್ ಮರದ ದೊಣ್ಣೆಯಿಂದ ಎಡ ಕಾಲಿನ ತೊಡೆಗೆ ಹೊಡೆದಿದ್ದು, ಗಾಯಗೊಂಡ ಸುಕುಮಾರ ಅವರನ್ನು ನೆರೆಯ ಕಮಲದಾಸ್ ಹಾಗೂ ಸುಕುಮಾರ ಅವರ ಪತ್ನಿ ಅಲ್ಪಮ್ಮ ಆರೈಕೆ ಮಾಡಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.


ಈ ಬಗ್ಗೆ ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!