Thursday, June 4, 2026
Homeಕರಾವಳಿಉಡುಪಿಉಡುಪಿ: ಪ್ರಗತಿಪರವಾದ ಕರಾವಳಿ ಜಿಲ್ಲೆಯನ್ನು ಪ್ರಯೋಗಶಾಲೆಯಾಗಿ ಮಾಡಿದ್ದಾರೆ: ಬಿಜೆಪಿ ವಿರುದ್ಧ ಸಚಿವ ವಿನಯ್‌ ಕುಮಾರ್‌ ಸೊರಕೆ...

ಉಡುಪಿ: ಪ್ರಗತಿಪರವಾದ ಕರಾವಳಿ ಜಿಲ್ಲೆಯನ್ನು ಪ್ರಯೋಗಶಾಲೆಯಾಗಿ ಮಾಡಿದ್ದಾರೆ: ಬಿಜೆಪಿ ವಿರುದ್ಧ ಸಚಿವ ವಿನಯ್‌ ಕುಮಾರ್‌ ಸೊರಕೆ ಆರೋಪ

- Advertisement -
- Advertisement -

ಉಡುಪಿ: ಬಿಜೆಪಿ ಹಾಗೂ ಎಸ್‌ಡಿಪಿಐ ಒಳಮೈತ್ರಿಯ ಬಗ್ಗೆ ಆರೋಪಿಸಿ ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ಬಿಜೆಪಿ ನಾಯಕರನ್ನು ಕುಟುಕಿದ್ದಾರೆ. ಉಡುಪಿಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು ಕಾಪುವಿನಲ್ಲಿ ಬಿಜೆಪಿ ಮತ್ತು ಎಸ್ಡಿಪಿಐ ಒಟ್ಟಿಗೆ ಸ್ಪರ್ಧೆ ಮಾಡಿದ್ದು, ನಾಮಪತ್ರವನ್ನೂ ಜೊತೆಯಾಗೇ ಸಲ್ಲಿಸಿ ವಿಜಯೋತ್ಸವ ಮಾಡಿವೆ. ಈ ಹಿಜಾಬ್ ವಿವಾದ ಬಿಜೆಪಿ ಮತ್ತು ಎಸ್ ಡಿ‌ಪಿ ಐ ನ ಕೂಸು ಅಂತ ಸೊರಕೆ ಹೇಳಿದ್ದಾರೆ.

ಇನ್ನು ನಾವು ಶಿಕ್ಷಣದಲ್ಲಿ ಕುಸಿತ ಕಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸೊರಕೆ ಇಷ್ಟು ವರ್ಷ  ಉಡುಪಿ ಶಿಕ್ಷಣ ಕ್ಷೇತ್ರದಲ್ಲಿ ನಂಬರ್‌ ೧ ಜಿಲ್ಲೆಯಾಗಿತ್ತು. ಇಂತಹ ಜಿಲ್ಲೆಯಲ್ಲಿ ಹಿಜಾಬ್ ವಿವಾದ ಮಾಡಿದ್ರು. ಅಂತರಾಷ್ಟ್ರೀಯ ಮಟ್ಟಕ್ಕೆ ವಿವಾದ ಹಬ್ಬುವಂಯಾಯಿತು.. ಮುಂದಿನ ಚುನಾವಣೆಗೋಸ್ಕರ ಹೀಗೆಲ್ಲ ಮಾಡುತ್ತಿದ್ದಾರೆ. ಪ್ರಗತಿಪರವಾದ ಕರಾವಳಿ ಜಿಲ್ಲೆಯನ್ನು ಪ್ರಯೋಗಶಾಲೆಯನ್ನಾಗಿ ಮಾಡಿದ್ದಾರೆ ಎಂದರು.

- Advertisement -

Latest News

error: Content is protected !!