Monday, June 8, 2026
Homeತಾಜಾ ಸುದ್ದಿಕಾಂಗ್ರೆಸ್ ಪಕ್ಷದವರನ್ನ ಸೂ.. ಮಕ್ಕಳಾ ಎಂದು ನಿಂದಿಸಿದ ಬಿಜೆಪಿ ಸಂಸದ

ಕಾಂಗ್ರೆಸ್ ಪಕ್ಷದವರನ್ನ ಸೂ.. ಮಕ್ಕಳಾ ಎಂದು ನಿಂದಿಸಿದ ಬಿಜೆಪಿ ಸಂಸದ

- Advertisement -
- Advertisement -

ಬೆಳಗಾವಿ: ವಿಜಯಪುರದ ಬಿಜೆಪಿ ಸಂಸದ ರಮೇಶ್ ಜಿಗಜಿಗಣಿ ಕಾಂಗ್ರೆಸ್ ಪಕ್ಷದವರನ್ನು ಸೂ.. ಮಕ್ಕಳಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಡೆದಿದೆ.

ಅವರು ಚಿಕ್ಕೋಡಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಜನತಾ ಪರಿವಾರದ ಮುಖಂಡರ ಸಹವಾಸದಿಂದ ಬೆಳೆದಿದ್ದೇವೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನಿಧನದ ನಂತರ ಕಾಂಗ್ರೆಸ್ ಪಕ್ಷಕ್ಕೆ ಬಾ ಎಂದು ಕರೆದಿದ್ದರು. ಕಾಂಗ್ರೆಸ್‍ ಪಕ್ಷದವರು ಸೂ.. ಮಕ್ಕಳಾ ಮನೆ ಹಾಳ ಮಾಡಿದ್ದಾರೆ ಎಂದರು. 

ಬಾಬಾಸಾಹೇಬ್‌ ಅಂಬೇಡ್ಕರ್ ಅವರನ್ನು ಕೊಲೆ ಮಾಡಿದ್ದಾರೆ. ಅವರ ಮರಣದ ನಂತರ ದೆಹಲಿಯಲ್ಲಿ ಮಣ್ಣು ಮಾಡಲು ಸ್ಥಳವನ್ನು ನೀಡಲಿಲ್ಲ. ನಿಮ್ಮಂಥ ಮನೆಹಾಳ ಪಕ್ಷ ಸೇರುವುದಿಲ್ಲ. ಏನೇ ಆಗಲಿ ಎಂದು ವಿರೋಧದ ನಡುವೆಯೂ ಬಿಜೆಪಿ ಸೇರಿದ್ದೇನೆ. ಜನತಾದಳದವನಾಗಿದ್ದರೂ ಸಂಘ ಪರಿವಾರ ಹಾಗೂ ಬಿಜೆಪಿಯ ಬಗ್ಗೆ ನನಗೆ ಗೌರವ ಇದೆ ಎಂದು ತಿಳಿಸಿದರು. 

- Advertisement -

Latest News

error: Content is protected !!