Friday, June 5, 2026
Homeತಾಜಾ ಸುದ್ದಿಧ್ವನಿವರ್ಧಕ ಆದೇಶ ಪಾಲಿಸದವರ ಮೇಲೆ ನಾನೇ ಶೂಟ್‌ ಮಾಡ್ತೀನಿ:  ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ

ಧ್ವನಿವರ್ಧಕ ಆದೇಶ ಪಾಲಿಸದವರ ಮೇಲೆ ನಾನೇ ಶೂಟ್‌ ಮಾಡ್ತೀನಿ:  ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ

- Advertisement -
- Advertisement -

ಹುಬ್ಬಳ್ಳಿ: ಧ್ವನಿವರ್ಧಕ ಬಳಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸದವರ ಮೇಲೆ ನಾನೇ ಗುಂಡಿಟ್ಟು ಹೊಡೀತೇನೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಮುತಾಲಿಕ್, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಸುಪ್ರೀಂಕೋರ್ಟ್ ಅದೇಶ ಪಾಲನೆ ಮಾಡದವರ ಬಗ್ಗೆ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ. ನಿಮಗೆ ಸರ್ಕಾರ ನಡೆಸಲು ಆಗದಿದ್ದರೆ ನನಗೆ ಕೊಡಿ. ಹೇಗೆ ಸರ್ಕಾರ ನಡೆಸಬೇಕು ಅನ್ನೋದನ್ನ ತೋರಿಸುತ್ತೇನೆ. ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡದವರ ಮೇಲೆ ಗುಂಡು ಹಾಕುತ್ತೇನೆ. ನನ್ ಕೈಯಲ್ಲಿ ಸರ್ಕಾರ ಕೊಡಿ, ಗುಂಡು ಹೊಡೀತೀನಿ. ನೀವ್ ಯಾಕೆ ಬಾಯಿ ಮುಚ್ಚಿಕೊಂಡು ಕುಳಿತುಕೊಂಡಿದ್ದೀರಿ ಅಂತ ಮುತಾಲಿಕ್‌ ಕಿಡಿ ಕಾರಿದ್ದಾರೆ.


ನಿಮ್ಮ ಕರ್ತವ್ಯವನ್ನು ನೀವು ಮಾಡಬೇಕು. ನಿಮ್ಮನ್ನ ಬಟಾ ಬಯಲು ಮಾಡ್ತೇವೆ. ಮುಂದಿನ ದಿನಗಳಲ್ಲಿ ಅವರನ್ನ ಆರಿಸಿ ತರಬೇಡಿ ಎಂದು ಹೇಳ್ತೇವೆ. ಸರ್ಕಾರ ನಮ್ಮ ಸುಪ್ರಭಾತಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿದ್ರು. ದೇವಸ್ಥಾನಗಳಿಗೆ ತೆರಳಿ- ಸುಪ್ರಭಾತ ಹಾಕದಂತೆ ಧಮ್ಕಿ ಹಾಕಿದ್ದಾರೆ‌. ಸರ್ಕಾರದ ಸೊಕ್ಕು ಅಡಗಿಸುವ ತನಕ ನಮ್ಮ ಹೋರಾಟ ಮುಂದುವರೆಯುತ್ತೆ.

- Advertisement -

Latest News

error: Content is protected !!