Thursday, June 4, 2026
Homeತಾಜಾ ಸುದ್ದಿಸ್ಮಶಾನದಲ್ಲೇ ಆತ್ಮಹತ್ಯೆ ಮಾಡಿಕೊಂಡ ಯುವಕ

ಸ್ಮಶಾನದಲ್ಲೇ ಆತ್ಮಹತ್ಯೆ ಮಾಡಿಕೊಂಡ ಯುವಕ

- Advertisement -
- Advertisement -

ಶಿವಮೊಗ್ಗ: ಸ್ಮಶಾನದಲ್ಲೇ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಈ ಘಟನೆ ನಡೆದಿದೆ.

ಚನ್ನಗಿರಿ ತಾಲೂಕಿನ ಕಾಗತ್ತೂರು ಗ್ರಾಮದ ಎಂ.ಕೆ. ಸ್ವಾಮಿ(27) ಎಂಬ ಯುವಕ‌ ಸ್ಮಶಾನದಲ್ಲೇ ಶೆಡ್ ನಲ್ಲಿ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾ‌ನೆ.

ಅಗುಂಬೆಯ ಹೊರಭಾಗದ ಕಾಡಿನಲ್ಲಿರುವ ಸ್ಮಶಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ ಮೇ 24 ರಿಂದ ಸ್ವಾಮಿ ನಾಪತ್ತೆಯಾಗಿದ್ದು,
ಮೊಬೈಲ್ ನೆಟ್ವರ್ಕ್ ಆಧಾರದ ಮೇಲೆ ಶೋಧ ನಡೆಸಿದಾಗ ಸ್ವಾಮಿ ಶವವಾಗಿ ಪತ್ತೆಯಾಗಿದ್ದಾನೆ. ಸ್ವಾಮಿಯ ಶವದ ಬಳಿ ಡೆತ್ ನೋಟ್, ಮೊಬೈಲ್ ಪತ್ತೆಯಾಗಿದ್ದು, ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!