Friday, June 5, 2026
Homeಆರಾಧನಾಮಸೀದಿಗಳಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ: ಪ್ರಮೋದ್ ಮುತಾಲಿಕ್

ಮಸೀದಿಗಳಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ: ಪ್ರಮೋದ್ ಮುತಾಲಿಕ್

- Advertisement -
- Advertisement -

ಮಂಗಳೂರು: ಮಳಲಿ ಒಂದು ಮಸೀದಿ ಮಾತ್ರವಲ್ಲ 30 ಸಾವಿರ ದೇವಸ್ಥಾನಗಳನ್ನೂ ವಾಪಾಸ್ ಪಡೆಯುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.


ಮಂಗಳೂರು ನಗರದ ಹೊರವಲಯ ಅಡ್ಯಾರ್ ಕಣ್ಣೂರಿನಲ್ಲಿ ಶುಕ್ರವಾರ ಎಸ್ ಡಿಪಿಐ ವತಿಯಿಂದ ಜನಾಧಿಕಾರ ಸಮಾವೇಶ ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಮಾತನಾಡಿದ ನಡೆದ ಎಸ್ ಡಿಪಿ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ” ಮಳಲಿ ಮಸೀದಿಯ ಒಂದು ಹಿಡಿ ಮರಳು ಕೂಡ ಮುಟ್ಟಲು ಬಿಡುವುದಿಲ್ಲ ಎಂದು ಹೇಳಿದ್ದರು.


ಈ ಮೂಲಕ ಮಳಲಿಯ ಮಸೀದಿ ಬಳಿ ತಾಂಬೂಲ ಪ್ರಶ್ನೆ ನಡೆಸಿದ್ದ ಹಿಂದೂ ಸಂಘಟನೆಗಳಿಗೆ ಸವಾಲ್ ಹಾಕಿದ್ದರು.
ಮಜೀದ್ ಮಾತಿನ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿದ ಪ್ರಮೋದ್ ಮುತಾಲಿಕ್ ಮಳಲಿ ಮಸೀದಿಯ ಮರಳು ಮಾತ್ರವಲ್ಲ, ಇಡೀ ಮಸೀದಿಯನ್ನೇ ಪಡೆಯುತ್ತೇವೆ.

ಕೇವಲ ಮಳಲಿ ಮಸೀದಿ ಮಾತ್ರವಲ್ಲ.ಭಾರತದಲ್ಲಿ ಧ್ವಂಸ ಮಾಡಿದ 30 ಸಾವಿರ ದೇವಾಲಯಗಳನ್ನು ವಾಪಾಸ್ ಪಡೆಯುತ್ತೇವೆ. ಎಲ್ಲವನ್ನೂ ಕಾನೂನಿನ ಮೂಲಕವೇ ವಾಪಾಸ್ ಪಡೆಯುತ್ತೇವೆ. ತಾಕತ್ತಿದ್ದರೆ ತಡೆಯಲಿ ಎಂದು ಪ್ರತಿ ಸವಾಲ್ ಹಾಕಿದ್ದಾರೆ.

- Advertisement -

Latest News

error: Content is protected !!