Sunday, June 7, 2026
Homeಕರಾವಳಿಮಂಗಳೂರಿನ ಹಿಜಾಬ್ ವಿಚಾರವನ್ನು ವಿವಾದ ಮಾಡುವ ಅಗತ್ಯ ಇಲ್ಲ :ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

ಮಂಗಳೂರಿನ ಹಿಜಾಬ್ ವಿಚಾರವನ್ನು ವಿವಾದ ಮಾಡುವ ಅಗತ್ಯ ಇಲ್ಲ :ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

- Advertisement -
- Advertisement -

ಬೆಂಗಳೂರು: ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ ವಿಚಾರವನ್ನು ವಿವಾದ ಮಾಡುವ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಪ್ರತಿಕ್ರಿಯೆ ಕೊಟ್ಟಿರುವ ಸಿಎಂ, ಈಗಾಗಲೇ ಕೋರ್ಟ್ ತನ್ನ ಆದೇಶ ಕೊಟ್ಟಿರುವ ಕಾರಣ, ಎಲ್ಲರೂ ಕೋರ್ಟ್ ಆದೇಶ ಪಾಲಿಸಬೇಕು ಎಂದು ಹೇಳಿದ್ದಾರೆ.

ಕೋರ್ಟ್ ಆದೇಶವನ್ನು ಈಗಾಗಲೇ
ಬಹುತೇಕ 99.99% ಜನ ಪಾಲಿಸಿದ್ದಾರೆ,
ಮ್ಯಾನೇಜ್ಮೆಂಟ್ ನವರು ಏನು ನಿರ್ಧಾರ ಮಾಡ್ತಾರೋ ಅದನ್ನ ಪಾಲಿಸಬೇಕು, ಸಿಂಡಿಕೇಟ್ ಸಹ ಕೋರ್ಟ್ ಆದೇಶ ಪಾಲಿಸಬೇಕಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

ಇದೇ ವೇಳೆ ವಿದ್ಯಾರ್ಥಿಗಳು ಹಿಜಾಬ್ ಬಿಟ್ಟು ವಿದ್ಯಾರ್ಜನೆ ಕಡೆ ಗಮನ ಕೊಡಲಿ ಎಂದೂ ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದ್ದಾರೆ.

- Advertisement -

Latest News

error: Content is protected !!