Wednesday, June 3, 2026
Homeತಾಜಾ ಸುದ್ದಿಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು

ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು

- Advertisement -
- Advertisement -

ಹೊಸಪೇಟೆ: ಹಲಾಲ್, ಜಟ್ಕಾ, ಹಿಜಾಬ್, ಆಜಾನ್ ಗಲಾಟೆಯ ಮಧ್ಯೆ ಹೊಸಪೇಟೆಯಲ್ಲಿ ಸಾಮರಸ್ಯ ಸಾರುವ ಘಟನೆಯೊಂದು ನಡೆದಿದೆ. ಅನಾರೋಗ್ಯದಿಂದ ಮೃತಪಟ್ಟ ಹಿಂದೂ ಮಹಿಳೆಯ ಅಂತ್ಯಸಂಸ್ಕಾರವನ್ನು ಮುಸ್ಲಿಂ ಯುವಕರು ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಯಮುನಮ್ಮ (75) ಎಂಬುವರು ನಗರದ ದೊಡ್ಡ ಮಸೀದಿ ಬಳಿ ಅನೇಕ ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾದ ಅವರನ್ನು ‘ಹಂಬಲ್ ಯುನೈಟೆಡ್ ಬ್ರದರ್ಸ್‌’ ಸಂಘಟನೆಯ ಯುವಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು.ಆದರೆ, ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

ವಿಷಯ ತಿಳಿದ ಯುವಕರು, ಹಿಂದೂ ಧರ್ಮದ ವಿಧಿ ವಿಧಾನಗಳ ಪ್ರಕಾರ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

- Advertisement -

Latest News

error: Content is protected !!