Saturday, June 6, 2026
Homeಕರಾವಳಿಮಳಲಿ ಮಸೀದಿಯಲ್ಲಿ ತಂಬೂಲ ಪ್ರಶ್ನೆ ವಿಚಾರ ; ಜ್ಯೋತಿಷ್ಯರಿಗೆ ಸವಾಲು ಹಾಕಿದ ರಾಷ್ಟ್ರೀಯ ವಿಚಾರವಾದಿ ಸಂಘದ...

ಮಳಲಿ ಮಸೀದಿಯಲ್ಲಿ ತಂಬೂಲ ಪ್ರಶ್ನೆ ವಿಚಾರ ; ಜ್ಯೋತಿಷ್ಯರಿಗೆ ಸವಾಲು ಹಾಕಿದ ರಾಷ್ಟ್ರೀಯ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್

- Advertisement -
- Advertisement -

ಮಂಗಳೂರು; ಮಳಲಿ ಮಸೀದಿಯಲ್ಲಿ ತಂಬೂಲ ಪ್ರಶ್ನೆ ವಿಚಾರಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಜ್ಯೋತಿಷ್ಯರಿಗೆ ಸವಾಲು ಹಾಕಿದ್ದಾರೆ.

ಆರು ಪ್ರತ್ಯೇಕ ಕವರ್‌ಗಳನ್ನು ಲಕೋಟೆಯೊಂದರಲ್ಲಿ 2022ರ ಮೇ 26ರ 11.33ಕ್ಕೆ ಸೀಲ್ ಮಾಡಲಾಗಿದೆ. ಅದನ್ನು ಜೂನ್ 1ರಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಬೆಳಗ್ಗೆ 10.30ಕ್ಕೆ ತೆರೆಯಲಾಗುವುದು. ಅಲ್ಲಿಯೇ ಬಹುಮಾನವನ್ನು ಘೋಷಿಸಲಾಗುವುದು.

ಭವಿಷ್ಯ ಹೇಳುವವರು ಮುಚ್ಚಿದ ಆರು ಲಕೋಟೆಗಳಲ್ಲಿ ಏನಿದೆ ಎಂಬುದನ್ನು ನಿಖರವಾಗಿ ಹೇಳತಕ್ಕದ್ದು. ಧಾರ್ಮಿಕ ನಂಬಿಕೆಗಳು, ಜಾತಿ, ಪಂಥ, ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಎಲ್ಲರಿಗೂ ಮುಕ್ತವಾಗಿದೆ. ಆಸಕ್ತರು ತಮ್ಮ ಉತ್ತರಗಳನ್ನು [email protected]ಗೆ ಇಮೇಲ್ ಅಥವಾ 9448216343 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡಬಹುದು ಎಂದು ಹೇಳಿದ್ದಾರೆ.

- Advertisement -

Latest News

error: Content is protected !!