Sunday, June 7, 2026
Homeಕರಾವಳಿಸುಳ್ಯ: ಫ್ಯಾನ್ಸಿ ಸ್ಟೋರ್ ನಲ್ಲಿ ಕೆಲಸಕ್ಕಿದ್ದ ಯುವತಿಯ ನಂಬರ್ ಕೇಳಿದ ಯುವಕ: ಮಾಡಬಾರದ ಕೆಲಸ ಮಾಡಲು...

ಸುಳ್ಯ: ಫ್ಯಾನ್ಸಿ ಸ್ಟೋರ್ ನಲ್ಲಿ ಕೆಲಸಕ್ಕಿದ್ದ ಯುವತಿಯ ನಂಬರ್ ಕೇಳಿದ ಯುವಕ: ಮಾಡಬಾರದ ಕೆಲಸ ಮಾಡಲು ಹೋದವನಿಗೆ ಬಿತ್ತು ಧರ್ಮದೇಟು

- Advertisement -
- Advertisement -

ಸುಳ್ಯ: ಫ್ಯಾನ್ಸಿ ಸ್ಟೋರಿನಲ್ಲಿ ಕೆಲಸಕ್ಕಿದ್ದ  ಯುವತಿಯ ಬಳಿ  ಸಮೀಪದ ಹೊಟೇಲ್‌ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ  ಫೋನ್ ನಂಬರ್ ಕೇಳಿ ಆಕೆಗೆ ಕೊಡದೇ ಇದ್ದಾಗ ಮೊಬೈಲ್ ಕಿತ್ತುಕೊಂಡು  ಅಸಭ್ಯವಾಗಿ ವರ್ತಿಸಿದ ಘಟನೆ  ಸುಳ್ಯದ ಹಳೇ ಗೇಟಿನಲ್ಲಿ ನಡೆದಿದೆ.

ಹಳೆಗೇಟಿನ ಹೋಟೆಲೊಂದರಲ್ಲಿ ಕೆಲಸ ಮಾಡುವ ಪಳ್ಳಂಗೋಡು ಮೂಲದ ಯುವಕ, ಯುವತಿ ಫ್ಯಾನ್ಸಿ ಸ್ಟೋರಿನಲ್ಲಿ ಒಬ್ಬಳೇ ಇದ್ದದ್ದನ್ನು ಗಮನಿಸಿ ಖರೀದಿಯ ನೆಪದಲ್ಲಿ ಬಂದಿದ್ದಾನೆ. ಹಾಗೆ ಬಂದವನು ಯುವತಿಯ ಫೋನ್ ನಂಬರ್ ಕೇಳಿದ್ದಾನೆ. ಈ ಸಂದರ್ಭ ಯುವತಿ ನಂಬರ್ ನೀಡಲು ನಿರಾಕರಿಸಿದ್ದಾಳೆ. ಆಗ ಆತ ಯುವತಿಯ ಕೈಯಿಂದ ಮೊಬೈಲ್ ಕಿತ್ತುಕೊಂಡು ಅದರಿಂದ ತನ್ನ ಮೊಬೈಲಿಗೆ ಕರೆ ಮಾಡುವ ಸಂದರ್ಭ ಯುವತಿ ಮೊಬೈಲ್ ಎಳೆದುಕೊಂಡು ಸ್ಥಳೀಯರನ್ನು ಕರೆದಿದ್ದಾಳೆ ಎನ್ನಲಾಗಿದೆ.  ಭಯಗೊಂಡ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ.

ನಂತರ ಯುವತಿ ಅವರ ಮನೆಯವರಿಗೆ ವಿಷಯ ತಿಳಿಸಿದ್ದು, ಯುವತಿಯ ಪೋಷಕರು ಮತ್ತು ಸ್ಥಳೀಯ ಯುವಕರು ಹೋಟೆಲ್ ಬಳಿಗೆ  ತೆರಳಿ ಯುವಕನನ್ನು ಅಂಗಡಿಯಿಂದ ಹೊರಕ್ಕೆ ಕರೆದು ಧರ್ಮದೇಟು ನೀಡಿದರೆನ್ನಲಾಗಿದೆ. ಬಳಿಕ ಬಂದ ಹೋಟೆಲ್ ಮಾಲೀಕರು ಆ ಯುವಕನಿಗೆ ಒಂದೇಟು ಹೊಡೆದು  ಆತನನ್ನು ಕೆಲಸದಿಂದ ವಜಾಗೊಳಿಸಿ ಕಳುಹಿಸಿರುವುದಾಗಿ ತಿಳಿದುಬಂದಿದೆ.

- Advertisement -

Latest News

error: Content is protected !!