Friday, June 5, 2026
Homeಕರಾವಳಿಸುಳ್ಯ :  ಮುರುಳ್ಯದ ಮಹಿಳೆ ನಾಪತ್ತೆ ಪ್ರಕರಣ: ಮಹಿಳೆಯನ್ನು ತಮಿಳುನಾಡಿನಿಂದ ಪತ್ತೆ ಹಚ್ಚಿ ಕರೆ ತಂದ...

ಸುಳ್ಯ :  ಮುರುಳ್ಯದ ಮಹಿಳೆ ನಾಪತ್ತೆ ಪ್ರಕರಣ: ಮಹಿಳೆಯನ್ನು ತಮಿಳುನಾಡಿನಿಂದ ಪತ್ತೆ ಹಚ್ಚಿ ಕರೆ ತಂದ ಬೆಳ್ಳಾರೆ ಪೊಲೀಸರು

- Advertisement -
- Advertisement -

ಸುಳ್ಯ :   ಮರುಳ್ಯ ಗ್ರಾಮದ ನಿಂತಿಕಲ್ಲಿನಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರನ್ನು ತಮಿಳುನಾಡಿನಲ್ಲಿ ಪತ್ತೆ ಹಚ್ಚಿ ಬೆಳ್ಳಾರೆ ಪೊಲೀಸರು ಕರೆ ತಂದಿದ್ದಾರೆ.

ಮುರುಳ್ಯ ಗ್ರಾಮದ ವಿಜಯಂಬಲ್ (48) ಎಂಬವರು ಮೇ.9 ರಂದು ಮಧ್ಯಾಹ್ನ ಮನೆಯಿಂದ ಹೇಳದೆ ನಿಂತಿಕಲ್ಲು ಕಡೆಗೆ ಹೋದವರು ಮರಳಿ ಮನೆಗೆ ಬಾರದೆ ಇದ್ದುದರಿಂದ ಇವರ ಪತಿ ಶಿವಲಿಂಗ ಎಂಬವರು ಬೆಳ್ಳಾರೆ ಠಾಣೆಯಲ್ಲಿ ಪೊಲೀಸು ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದು ತಮಿಳುನಾಡು ರಾಜ್ಯದ ನೀಲಗಿರಿ ಜಿಲ್ಲೆಯ ದೇವಲ ಎಂಬಲ್ಲಿಂದ ಮಹಿಳೆನ್ನು ಪತ್ತೆಹಚ್ಚಿ  ಕರೆದುಕೊಂಡು ಬಂದಿದ್ದಾರೆ.

ಪೊಲೀಸರಾದ ಕೃಷ್ಣಪ್ಪ ಮತ್ತು ಚಂದ್ರಶೇಖರ್ ರವರು ಠಾಣೆಯ ಎಸ್.ಐ.ರುಕ್ಮ ನಾಯ್ಕ್ ಮಾರ್ಗದರ್ಶನದಲ್ಲಿ ಪತ್ತೆ ಕಾರ್ಯ ನಡೆಸಿದ್ದಾರೆ.

- Advertisement -

Latest News

error: Content is protected !!