Sunday, June 7, 2026
Homeತಾಜಾ ಸುದ್ದಿಜೀವನದಲ್ಲಿ ಜಿಗುಪ್ಸೆಗೊಂಡು ದಂಪತಿ ಅತ್ಮಹತ್ಯೆ

ಜೀವನದಲ್ಲಿ ಜಿಗುಪ್ಸೆಗೊಂಡು ದಂಪತಿ ಅತ್ಮಹತ್ಯೆ

- Advertisement -
- Advertisement -

ದಾವಣಗೆರೆ: ಜೀವನದಲ್ಲಿ ಜಿಗುಪ್ಸೆಯಿಂದಾಗಿ ಗಂಡ-ಹೆಂಡತಿ ಇಬ್ಬರೂ ಪಿಕಪ್ ಡ್ಯಾಂಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಹರ ತಾಲೂಕಿನ ದೇವರಬೆಳಕೆರೆಯಲ್ಲಿ ನಡೆದಿದೆ.


ಹರಿಹರ ತಾಲೂಕಿನ ಸಂಕ್ಲಿಪುರದ ನಿವಾಸಿಗಳಾದ ಮಠದ ಚೆನ್ನಪ್ಪಸ್ವಾಮಿ(45), ವನಜಾಕ್ಷಮ್ಮ(37) ಆತ್ಮಹತ್ಯೆ ಮಾಡಿಕೊಂಡ ದಂಪತಿ ಎಂದು ತಿಳಿದುಬಂದಿದೆ.


ಪಿಕಪ್ ಡ್ಯಾಂ ನಲ್ಲಿ ಚೆನ್ನಪ್ಪಸ್ವಾಮಿ ದಂಪತಿಯ ಮೃತದೇಹ ತೇಲುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.


ಪ್ರಕರಣ ಸಂಬಂಧ ಹರಿಹರ ಗ್ರಾಮಾಂತರ ಠಾಣೆ ಪೊಲೀಸ್ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!