Friday, June 5, 2026
Homeತಾಜಾ ಸುದ್ದಿಆರ್ಡರ್ ಮಾಡಿದ ಫುಡ್ ಕ್ಯಾನ್ಸಲ್ ಮಾಡಲೊಪ್ಪದ ರೆಸ್ಟೋರೆಂಟ್ ಸಿಬ್ಬಂದಿ: ಸಿಟ್ಟಿಗೆದ್ದ ಗ್ರಾಹಕರ ಗುಂಪಿನಿಂದ ಸಿಬ್ಬಂದಿಗೆ ಥಳಿತ

ಆರ್ಡರ್ ಮಾಡಿದ ಫುಡ್ ಕ್ಯಾನ್ಸಲ್ ಮಾಡಲೊಪ್ಪದ ರೆಸ್ಟೋರೆಂಟ್ ಸಿಬ್ಬಂದಿ: ಸಿಟ್ಟಿಗೆದ್ದ ಗ್ರಾಹಕರ ಗುಂಪಿನಿಂದ ಸಿಬ್ಬಂದಿಗೆ ಥಳಿತ

- Advertisement -
- Advertisement -

ಚಿಕ್ಕಬಳ್ಳಾಪುರ: ಆರ್ಡರ್ ಮಾಡಿದ ಫುಡ್ ಕ್ಯಾನ್ಸಲ್ ಮಾಡಲ್ಲ ಎಂದಿದ್ದಕ್ಕೆ ಗ್ರಾಹಕರ ಗುಂಪು ರೆಸ್ಟೋರೆಂಟ್ ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು ಹೊಡೆದಿದೆ.‌

ಚಿಕ್ಕಬಳ್ಳಾಪುರದ ಶ್ರೇಯಸ್ ರೆಸ್ಟೋರೆಂಟ್ ನಲ್ಲಿ ಗ್ರಾಹಕರು ಹಾಗೂ ಸಿಬ್ಬಂದಿ ಮಧ್ಯೆ ಮಾರಾಮಾರಿ ನಡೆದಿದೆ. ಆರ್ಡರ್ ಮಾಡಿದ್ದ ಪುಡ್ ಕ್ಯಾನ್ಸಲ್ ಮಾಡಲ್ಲ ಎಂದಿದ್ದಕ್ಕೆ ಗಲಾಟೆಯಾಗಿದ್ದು, ರೆಸ್ಟೋರೆಂಟ್ ಸಿಬ್ಬಂದಿಯ ಮೇಲೆ ಗ್ರಾಹಕರಿಂದ ಹಲ್ಲೆ ನಡೆದಿದೆ.

ಗ್ರಾಹಕರ ಹಲ್ಲೆಯಿಂದ ಸಿಟ್ಟಿಗೆದ್ದ ರೆಸ್ಟೋರೆಂಟ್ ಕ್ಯಾಶಿಯರ್ ನಿಂದ ಪ್ರತಿಯಾಗಿ ಹಲ್ಲೆ ನಡೆದಿದ್ದು ಇದರಿಂದ ಕೆರಳಿದ ಗ್ರಾಹಕರ ಗುಂಪು ರೆಸ್ಟೋರೆಂಟ್ ಸಿಬ್ಬಂದಿಯೋರ್ವನನ್ನು ಅಟ್ಟಾಡಿಸಿ ಥಳಿಸಿದೆ. ಥಳಿತದ ವೀಡಿಯೊ ಮೊಬೈಲ್ ಫೋನ್‌ ನಲ್ಲಿ ಸೆರೆಯಾಗಿದ್ದು, ರೆಸ್ಟೋರೆಂಟ್ ಗೆ ಚಿಕ್ಕಬಳ್ಳಾಪುರ ನಗರ ಹಾಗೂ ಗ್ರಾಮಾಂತರ ಠಾಣೆಗಳ ಪೊಲೀಸರು ಭೇಟಿ ನೀಡಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ಗಲಾಟೆ ಮಾಡಿದ್ದವರು ಎಸ್ಕೇಪ್ ಆಗಿದ್ದಾರೆ.

- Advertisement -

Latest News

error: Content is protected !!