Thursday, October 15, 2026
Homeಕರಾವಳಿಕಾರ್ಕಳ: ದಿಂಬಿನಿಂದ ಉಸಿರುಗಟ್ಟಿಸಿ ಪತಿಯ ಕೊಲೆಗೆ ಯತ್ನ

ಕಾರ್ಕಳ: ದಿಂಬಿನಿಂದ ಉಸಿರುಗಟ್ಟಿಸಿ ಪತಿಯ ಕೊಲೆಗೆ ಯತ್ನ

- Advertisement -
- Advertisement -

ಕಾರ್ಕಳ: ಪಾಪಿ ಪತ್ನಿಯೊಬ್ಬಳು ಪತಿಯನ್ನು ಉಸಿರುಗಟ್ಟಿಸಿ ಕೊಲೆಗೆ ಯತ್ನಿಸಿರುವ ಘಟನೆ ಹೆಬ್ರಿಯ ಮುದ್ರಾಡಿ ಗ್ರಾಮದ ಸುಬ್ಬಣ್ಣಕಟ್ಟೆ ಬಳಿ ನಡೆದಿದೆ.

ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸಿ ಪತಿಯನ್ನು ಹತ್ಯೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಜಯಾನಂದ ಕಾಮತ್  ಎಂಬವರ ಪತ್ನಿ ಅಮಿತಾ ಕಾಮತ್ ಮತ್ತು ಮಗ ದೀಕ್ಷಿತ್ ನೊಂದಿಗೆ ಮುದ್ರಾಡಿ ಗ್ರಾಮದ ಸುಬ್ಬಣ್ಣಕಟ್ಟೆಯಲ್ಲಿ ವಾಸವಾಗಿದ್ದಾರೆ. ಜಯಾನಂದ ಅವರ ಹೆಸರಿನಲ್ಲಿ ಪೆರ್ಡೂರಿನಲ್ಲಿ ಜಾಗವಿದ್ದು ಅದನ್ನು ತನ್ನ ಹೆಸರಿಗೆ ಮಾಡಿಕೊಡಬೇಕೆಂದು ಪತ್ನಿ ತಕರಾರು ತೆಗೆಯುತ್ತಿದ್ದರಂತೆ.

ಸುಮಾರು ಮೂರು ದಿನಗಳಿಂದ ಅಮಿತಾಳ ಸ್ನೇಹಿತ ಮಂಜುನಾಥ್ ಕಾಮತ್ ಇವರ ಮನೆಯಲ್ಲೇ ಉಳಿದುಕೊಂಡಿದ್ದು, ಶನಿವಾರ ರಾತ್ರಿ ಮಗ ದೀಕ್ಷಿತ್ ಮತ್ತು ಮಂಜುನಾಥ ಸೇರಿಕೊಂಡು ಜಯಾನಂದ ಅವರ ಹೆಸರಿಗೆ ಬರೆದುಕೊಡುವಂತೆ ಹೇಳಿದ್ದರು ಎನ್ನಲಾಗಿದೆ.

ಒಪ್ಪದೇ ಇದ್ದಾಗ  ಕೈ ಕಾಲುಗಳನ್ನು ಕಟ್ಟಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಆಸ್ತಿ ಕೊಡುವುದಾಗಿ ಹೇಳಿದಾಗ ಸಹಿ ಪಡೆದುಕೊಂಡು ಬಿಟ್ಟಿದ್ದಾರೆ ಎಂದು ದೂರು ದಾಖಲಾಗಿದೆ

- Advertisement -

Latest News

error: Content is protected !!