Friday, June 5, 2026
Homeಕರಾವಳಿಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ವಾಹನಗಳ ಕಿರಿಕಿರಿ: ತುರ್ತು ಸಂಧರ್ಭದಲ್ಲಿ ರಸ್ತೆಯಲ್ಲಿ ಕಾಯುವ ಪರಿಸ್ಥಿತಿ...

ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ವಾಹನಗಳ ಕಿರಿಕಿರಿ: ತುರ್ತು ಸಂಧರ್ಭದಲ್ಲಿ ರಸ್ತೆಯಲ್ಲಿ ಕಾಯುವ ಪರಿಸ್ಥಿತಿ : ಕಣ್ಣಿದ್ದು ಕುರುಡರಾಗಿರುವ ಅಧಿಕಾರಿಗಳು

- Advertisement -
- Advertisement -

ಬೆಳ್ತಂಗಡಿ :  ತಾಲೂಕು ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ಪ್ರತಿನಿತ್ಯ ಪಕ್ಕದಲ್ಲಿರುವ ಹೋಟೆಲ್‌ ಗೆ ಮತ್ತು ಅಂಗಡಿಗಳಿಗೆ ಬರುವ ಜನರ ವಾಹನ ಅಡ್ಡಲಾಗಿ ನಿಂತು ತೊಂದರೆ ಅನುಭವಿಸುವಂತ ಪರಿಸ್ಥಿತಿ ನಿರ್ಮಾಣ ಅಗುತ್ತಿರುವ ಘಟನೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ನಡೆಯುತ್ತಿದೆ.

ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿರುವ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಹೋಗುವ ರಸ್ತೆಯ ಬದಿ ಇರುವ ಹೋಟೆಲ್ ಮತ್ತು ಅಂಗಡಿಗೆ ಬರುವ ಗ್ರಾಹಕರು ಮತ್ತು ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲ್ಲಿಸಿ ಆಸ್ಪತ್ರೆಗೆ ರೋಗಿಗಳನ್ನು ಕರೆತರುವ ವಾಹನ ಹಾಗೂ ಅಂಬುಲೆನ್ಸ್ ಗಳಿಗೆ ದಿನನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಪೋಲಿಸರು ಹಾಗೂ ನಗರ ಪಂಚಾಯತ್ ಅಧಿಕಾರಿಗಳು ಈ ಮೊದಲು ಇಲ್ಲಿ “No parking” ಬೋರ್ಡ್ ಅಳವಡಿಸಿದ್ದರು,ಆದರೆ ಕೆಲವರು ರಸ್ತೆಯ ಮಧ್ಯದಲ್ಲೇ ವಾಹನ ನಿಲ್ಲಿಸಿ ತುರ್ತು ವಾಹನಗಳಿಗೂ ಅಡಚಣೆಗೊಳಿಸುವ ಕಾರ್ಯ ದಿನನಿತ್ಯ ನಡೆಯುತ್ತಿದ್ದರು ಸ್ಥಳೀಯ ಸಂಚಾರಿ ಪೋಲಿಸರು ಗಮನಹರಿಸುತ್ತಿಲ್ಲ.

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಾಲೂಕಿನ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಸಾರ್ವಜನಿಕರಿಗಾಗುವ ತೊಂದರೆಯಿಂದ ಮುಕ್ತಿಗೊಳಿಸಲು ಸಾರ್ವಜನಿಕರು ವಿನಂತಿ‌ ಮಾಡುತ್ತಿದ್ದಾರೆ.

- Advertisement -

Latest News

error: Content is protected !!