Friday, June 5, 2026
Homeತಾಜಾ ಸುದ್ದಿಮಳೆಯಿಂದ ಕೆರೆ ತುಂಬಿದ್ದಕ್ಕೆ ಮೇಕೆ, ಕುರಿ ಬಲಿ ನೀಡಿದ ಗ್ರಾಮಸ್ಥರು!

ಮಳೆಯಿಂದ ಕೆರೆ ತುಂಬಿದ್ದಕ್ಕೆ ಮೇಕೆ, ಕುರಿ ಬಲಿ ನೀಡಿದ ಗ್ರಾಮಸ್ಥರು!

- Advertisement -
- Advertisement -

ಹಾಸನ: ಮಳೆಯಿಂದಾಗಿ ಕೆರೆ ತುಂಬಿದ್ದಕ್ಕೆ ಗ್ರಾಮಸ್ಥರು ಮೇಕೆ ಮತ್ತು ಕುರಿ ಬಲಿ ನೀಡಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಎರಡೂವರೆ ದಶಕದ ಬಳಿಕ ತುಂಬಿದ ಕೆರೆಯಿಂದ ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿದ್ದು, ಪ್ರಾಣಿ ಬಲಿ ನೀಡಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆ ಬಳಿಯ ಕೊಳ್ಳೆನಹಳ್ಳಿ ರೈತರಿಂದ ಹಬ್ಬ ಆಚರಣೆ ನಡೆದಿದೆ. ಕೆರೆ ತುಂಬಿದ ಖುಷಿಯಲ್ಲಿ ಕೋಡಿ ಬಿದ್ದ ಕರೆ ನೀರಿನಲ್ಲೇ ಮೇಕೆ ಕುರಿ ನಿಲ್ಲಿಸಿ ಬಲಿ ನೀಡಲಾಗಿದೆ.

ಕಳೆದ ಒಂದು ವಾರದ ಮಳೆಗೆ ಹಿರಿಸಾವೆ ದೊಡ್ಡ ಕೆರೆ ತುಂಬಿ ಹರಿದಿದೆ.

- Advertisement -

Latest News

error: Content is protected !!