Wednesday, June 3, 2026
Homeತಾಜಾ ಸುದ್ದಿಕೋಳಿಗೆ ಮೇವು ಹಾಕಿಲ್ಲ ಅಂತ ಮಗಳನ್ನೇ ಕೊಂದ ತಂದೆ

ಕೋಳಿಗೆ ಮೇವು ಹಾಕಿಲ್ಲ ಅಂತ ಮಗಳನ್ನೇ ಕೊಂದ ತಂದೆ

- Advertisement -
- Advertisement -

ಹರಿಯಾಣ : ಮನೆಯಲ್ಲಿ ಸಾಕಿದ ಕೋಳಿಗಳಿಗೆ ನೀರು, ಕಾಳು ಹಾಕಲಿಲ್ಲ ಎಂಬ ಕಾರಣಕ್ಕೆ ಹೆತ್ತ ಮಗಳನ್ನೇ ಪಾಪಿ ತಂದೆ ಹೊಡೆದು ಕೊಲೆ ಮಾಡಿದ್ದಾನೆ. ಹರಿಯಾಣದ ಸೋನಿಪತ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪಾಪಿ ತಂದೆಯನ್ನು ಬಂಧಿಸಿದ್ದು ವಿಚಾರಣೆ ವೇಳೆ, ಕೋಳಿಗಳಿಗೆ ನೀರು ಕಾಳು ಹಾಕದೆ ಇರುವ ಕಾರಣ ಮಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಕಟ್ಟಿಗೆಯಿಂದ ಅವಮಾನೀಯ ರೀತಿಯಲ್ಲಿ ಥಳಿಸಿರೋದಾಗಿ ತಂದೆ ತಿಳಿಸಿದ್ದಾನೆ.. ಥಳಿತಕ್ಕೆ ಒಳಗಾದ ಬಾಲಕಿ ಸ್ಥಳದಲ್ಲೇ ಅಸುನೀಗಿದ್ದಾಳೆ.  

- Advertisement -

Latest News

error: Content is protected !!