Saturday, May 18, 2024
Homeತಾಜಾ ಸುದ್ದಿಬೆಳ್ತಂಗಡಿ: MLC ತಮ್ಮನ ಮಗನಿಂದ 94/C ಅಡಿಯಲ್ಲಿ ಹಕ್ಕುಪತ್ರ ಪಡೆದ ಪ್ರಕರಣ: ಹಕ್ಕುಪತ್ರವನ್ನು ರದ್ದು ಪಡಿಸಿ...

ಬೆಳ್ತಂಗಡಿ: MLC ತಮ್ಮನ ಮಗನಿಂದ 94/C ಅಡಿಯಲ್ಲಿ ಹಕ್ಕುಪತ್ರ ಪಡೆದ ಪ್ರಕರಣ: ಹಕ್ಕುಪತ್ರವನ್ನು ರದ್ದು ಪಡಿಸಿ ಆದೇಶ ಹೊರಡಿಸಿದ ತಹಶೀಲ್ದಾರ್

spot_img
- Advertisement -
- Advertisement -

ಬೆಳ್ತಂಗಡಿ : ಬೆಳ್ತಂಗಡಿ MLC ಯ ತಮ್ಮನ ಮಗ 94/C ಅಡಿಯಲ್ಲಿ ಜಾಗವನ್ನು ಪಡೆದು ಸರ್ಕಾರಕ್ಕೆ ವಂಚನೆ ಮಾಡಿದ ಸಂಬಂಧ ಇದೀಗ ಬೆಳ್ತಂಗಡಿ ತಹಶೀಲ್ದಾರ್ ಹಕ್ಕುಪತ್ರವನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಬಡಗಕಾರಂದೂರು ಗ್ರಾಮದ ಅಳದಂಗಡಿ ಬಸ್ ನಿಲ್ದಾಣದ ಸಮೀಪ ಬೆಲೆಬಾಳುವ ಸರ್ಕಾರಿ ಜಮೀನಿನನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ, 2016-17 ರಲ್ಲಿ ಶ್ರೀಮಂತ ವ್ಯಕ್ತಿಯೊರ್ವರು, ವಾಸ್ತವ್ಯೇತರ ಅಂಗಡಿ ಕಟ್ಟಡ (ಗ್ಯಾರೇಜ್) ವನ್ನು, ವಾಸ್ತವ್ಯದ ಮನೆಯೆಂದು ಸುಳ್ಳು ದಾಖಲೆ ಸೃಷ್ಟಿಸಿ, HSRSR 140/2016-17 ರಂತೆ 94C ಅಡಿಯಲ್ಲಿ ಹಕ್ಕುಪತ್ರವನ್ನು ಮಂಜೂರು ಮಾಡಿಸಿಕೊಂಡಿದ್ದಾರೆ.

ಈ ಬಗ್ಗೆ 2017 ರಲ್ಲಿ ಸ್ಥಳೀಯರು ನೀಡಿದ ದೂರಿನಂತೆ  ಪುತ್ತೂರು ಉಪವಿಭಾಗಾಧಿಕಾರಿ , ಜಿಲ್ಲಾಧಿಕಾರಿ ನ್ಯಾಯಾಲಯವು ಬೆಳ್ತಂಗಡಿ ತಹಶೀಲ್ದಾರ್ ರವರಿಗೆ ಸ್ಥಳ ತನಿಖೆ ನಡೆಸಿ ನಿಯಮಾನುಸಾರ ಪ್ರಕರಣವನ್ನು ಇತ್ಯರ್ಥಪಡಿಸಲು ಆದೇಶಿಸಿತು. ಈ ಬಗ್ಗೆ ಇತ್ತೀಚಿಗೆ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ , ವೇಣೂರು ಕಂದಾಯ ನಿರೀಕ್ಷಕರು , ಬಡಗಕಾರಂದೂರು ಗ್ರಾಮಕರಣಿಕರು ಸ್ಥಳ ಮಹಜರು ನಡೆಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಎಮ್.ಎಲ್.ಸಿ ಹರೀಶ್ ಕುಮಾರ್ ಅವರ ತಮ್ಮನ ಮಗನಾದ  ಜೋಶಿಲ್ ವೈ ಕುಮಾರ್ ಬಿನ್ ಯೋಗೀಶ್ ಕುಮಾರ್ ಕೆ.ಎಸ್ ನಡಕ್ಕರ ಅವರಿಗೆ ಮಂಜೂರುಗೊಂಡ ಬಡಗಕಾರಂದೂರು ಗ್ರಾಮದ ಸ.ನಂ 84/1P1 ರಲ್ಲಿ 0.09 ಎಕರೆ ಜಮೀನಿನಲ್ಲಿ ವಾಸ್ತವ್ಯದ ಮನೆಯ ಬದಲಾಗಿ ವಾಸ್ತವ್ಯೇತರ ಅಂಗಡಿ ಕಟ್ಟಡ ಇರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಶರ್ತ ಉಲ್ಲಂಘನೆಯಾಗಿರುವ ಕಾರಣ ಹಕ್ಕುಪತ್ರ ಹಾಗೂ ಜಮೀನಿನ ನಕ್ಷೆಯನ್ನು ರದ್ದು ಪಡಿಸಿ ಬೆಳ್ತಂಗಡಿ ತಹಶೀಲ್ದಾರ್ ಆದೇಶಿಸಿದ್ದಾರೆ. ಪಹಣಿಪತ್ರ ರದ್ದು ಪಡಿಸಿ ಸರ್ಕಾರ ಎಂದು ದಾಖಲಿಸಲು ಆದೇಶ ನೀಡುವಂತೆಯೂ ಪುತ್ತೂರು ಉಪವಿಭಾಗಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.

ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ MLC ಹರೀಶ್ ಕುಮಾರ್ ಅವರ ತಮ್ಮನಾಗಿರುವ ಯೋಗೀಶ್ ಕುಮಾರ್ ನಡಕ್ಕರ ಅವರು ಪಡಂಗಡಿ ಗ್ರಾಮದ ಬದ್ಯಾರ್  ಕೋಟಿಕಟ್ಟೆ ಬಳಿಯ ನಿವಾಸಿಯಾಗಿದ್ದು ಶ್ರೀಮಂತ ವ್ಯಕ್ತಿಯಾಗಿದ್ದು ವಿವಿಧೆಡೆ ಜಾಗವನ್ನು ಹೊಂದಿದ್ದಾರೆ. ಅದಲ್ಲದೆ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಜಯಶ್ರೀ ಕಟ್ಟಡವನ್ನು ಹೊಂದಿದ್ದಾರೆ. ಇವರ ಮಗ ಜೋಶಿಲ್ ವೈ ಕುಮಾರ್ ಉಜಿರೆ, ಬಾರ್ & ರೆಸ್ಟೋರೆಂಟ್ ನಡೆಸುತ್ತಿದ್ದಾನೆ ಆದರೂ ಬಡವರಿಗೆ ನೀಡುವ ಯೋಜನೆಯನ್ನು ಪಡೆಯಲು ಹೋಗಿ ಸಿಕ್ಕಿಬಿದ್ದು ಮರ್ಯಾದೆ ತೆಗೆದುಕೊಳ್ಳುವಂತಾಗಿದೆ.

ಇನ್ನು ಈ ಅಕ್ರಮದ ವಿರುದ್ಧ ಹೋರಾಡಿದ ಅಯ್ಯೂಬ್ ಶಾಫಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಳೆದ 6 ವರ್ಷಗಳಿಂದ ಸತತವಾಗಿ ಸರ್ಕಾರಿ ಜಮೀನು ಉಳಿವಿಗಾಗಿ ನಡೆಸಿದ ಹೋರಾಟಕ್ಕೆ ಅಂತಿಮ ಜಯ ಸಿಕ್ಕಿದೆ. ಸುಳ್ಳು ಮಾಹಿತಿ ನೀಡಿ ಸರ್ಕಾರಿ ಸವಲತ್ತುಗಳನ್ನು ಪಡೆಯುವ ಶ್ರೀಮಂತ ವರ್ಗದವರಿಗೆ ಇದು ಪಾಠ ಕಲಿಸಿದಂತಾಗಿದೆ ಅಂತ ಹೇಳಿದ್ದಾರೆ

- Advertisement -
spot_img

Latest News

error: Content is protected !!