Wednesday, June 3, 2026
Homeಕರಾವಳಿಕಾರಿಂಜೇಶ್ವರ ದೇವಸ್ಥಾನದಲ್ಲಿ ಬಂಡೆ ಕುಸಿತ : ರಸ್ತೆಗೆ ಉರುಳಿದ ಬೃಹತ್ ಬಂಡೆ

ಕಾರಿಂಜೇಶ್ವರ ದೇವಸ್ಥಾನದಲ್ಲಿ ಬಂಡೆ ಕುಸಿತ : ರಸ್ತೆಗೆ ಉರುಳಿದ ಬೃಹತ್ ಬಂಡೆ

- Advertisement -
- Advertisement -

ಬಂಟ್ವಾಳ :  ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕಾರಿಂಜೇಶ್ವರನ ಸನ್ನಿಧಿಯಿಂದ ಬೃಹತ್ ಗಾತ್ರದ ಬಂಡೆ ಇಂದು ಕುಸಿದು ರಸ್ತೆಗೆ ಉರುಳಿದೆ.

ಬೃಹತ್ ಗಾತ್ರದ ಕಲ್ಲುಗಳ ಬುಡ ಸಂದಿಗಳು ಸಡಿಲಗೊಂಡಿದ್ದರಿಂದ ಅನಾಹುತ ನಡೆದಿದೆ. ಇದೇ ರೀತಿ ದೇಗುಲಕ್ಕೆ ಆಧಾರಸ್ಥಂಭವಾಗಿ  ನಿಂತಿರುವ ಬಂಡೆಗಳು ಕುಸಿದರೆ ಅನ್ನೋ ಆತಂಕ ಇದೀಗ ಭಕ್ತರನ್ನು ಕಾಡುತ್ತಿದೆ.

ಇನ್ನು ಕಾರಿಂಜೇಶ್ವರ ಕ್ಷೇತ್ರದ ಸುತ್ತಮುತ್ತ ಈ ಹಿಂದೆ ನಡೆಯುತ್ತಿದ್ದ ಗಣಿಕಾರಿಕೆಯ ಸ್ಫೋಟದ ಪರಿಣಾಮದಿಂದ ಈ ರೀತಿ ಬಂಡೆ ಕುಸಿದಿರಬಹುದು ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

- Advertisement -

Latest News

error: Content is protected !!