Sunday, June 29, 2025
Homeಅಪರಾಧಕಾಸರಗೋಡಿಗೆ ಎಂಡಿಎಂ ಮಾದಕ ವಸ್ತು ಸಾಗಿಸುತ್ತಿದ್ದ ಇಬ್ಬರ ಬಂಧನ

ಕಾಸರಗೋಡಿಗೆ ಎಂಡಿಎಂ ಮಾದಕ ವಸ್ತು ಸಾಗಿಸುತ್ತಿದ್ದ ಇಬ್ಬರ ಬಂಧನ

spot_img
- Advertisement -
- Advertisement -

ಭಾರೀ ಮೌಲ್ಯದ ಎಂಡಿಎಂ ಮಾದಕ ವಸ್ತುವನ್ನು ಬೆಂಗಳೂರಿನಿಂದ ಕಾಸರಗೋಡಿಗೆ ಸಾಗಿಸುತ್ತಿದ್ದ ಇಬ್ಬರನ್ನು ಆದೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಮುಳಿಯಾರಿನ ನಿಜಾಮುದ್ದೀನ್(27) ಹಾಗು ಉದುಮ ಮಾಂಗಾಡ್ ನ ಮುನೀರ್ ಆಗಿದ್ದಾರೆ. ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ಕಾರ್ಯಚರಣೆ ನಡೆದಿದ್ದು, ಆರೋಪಿಗಳ ಜೀಪನ್ನು ತಡೆದು ನಿಲ್ಲಿಸಿದಾಗ ಮಾದಕ ವಸ್ತುಗಳ ಪತ್ತೆಯಾಗಿದೆ.

ಆರೋಪಿಗಳು ಬೆಂಗಳೂರಿನಿಂದ ಮಾದಕ ವಸ್ತುಗಳನ್ನು ತಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರ ಕಾರ್ಯಾಚರಣೆಯು ಯಶಸ್ವಿಯಾಗಿದೆ.

- Advertisement -
spot_img

Latest News

error: Content is protected !!