Thursday, June 4, 2026
Homeತಾಜಾ ಸುದ್ದಿಕಳ್ಳತನಕ್ಕೆಂದು ಲಾಂಗ್ ಹಿಡಿದು ಚಿನ್ನದಂಗಡಿಗೆ ನುಗ್ಗಿದ ಕಳ್ಳ: ಆತನ ಲಾಂಗ್ ಕಿತ್ತು ಕಳುಹಿಸಿದ ಅಂಗಡಿ ಮಾಲೀಕ

ಕಳ್ಳತನಕ್ಕೆಂದು ಲಾಂಗ್ ಹಿಡಿದು ಚಿನ್ನದಂಗಡಿಗೆ ನುಗ್ಗಿದ ಕಳ್ಳ: ಆತನ ಲಾಂಗ್ ಕಿತ್ತು ಕಳುಹಿಸಿದ ಅಂಗಡಿ ಮಾಲೀಕ

- Advertisement -
- Advertisement -

ಬೆಂಗಳೂರು: ಲಾಂಗ್ ಹಿಡಿದು ಚಿನ್ನದಂಡಿಗೆ ನುಗ್ಗಿ ದರೋಡೆಗೆ ಯತ್ನಿಸಿದ ಕಳ್ಳನ ಲಾಂಗ್‍ನನ್ನು ಮಾಲೀಕನೇ ಕಿತ್ತು ಕಳುಹಿಸಿರುವ ಘಟನೆ ಬೆಂಗಳೂರಿನ ಪುಲಕೇಶಿ ನಗರದಲ್ಲಿ ನಡೆದಿದೆ.

ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳ ಲಾಂಗ್ ಹಿಡಿದು ನೇರವಾಗಿ ಅಂಗಡಿಗೆ ನುಗ್ಗಿದ್ದಾನೆ. ಬಳಿಕ ಮಾಲೀಕನನ್ನು ಹಣ ನೀಡುವಂತೆ ಬೆದರಿಸಿದ್ದಾನೆ. ಇದರಿಂದ ಆತಂಕಗೊಂಡ ಮಾಲೀಕ ಹಣ ನೀಡಲು ಮುಂದಾಗಿದ್ದಾನೆ. ಈ ವೇಳೆ ಹಣದ ಪೆಟ್ಟಿಗೆಗೆ ಆರೋಪಿಯೇ ಕೈ ಹಾಕಿ ಹಣ ದೋಚಲು ಯತ್ನಿಸಿದಾಗ, ಆತನ ಕೈಯಲ್ಲಿದ್ದ ಲಾಂಗ್‍ನನ್ನು ಅಂಗಡಿ ಮಾಲೀಕ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಕಿರುಚಾಡಲು ಪ್ರಾರಂಭಿಸಿದ್ದಾನೆ.

ಈ ವೇಳೆ ಸ್ಥಳದಲ್ಲಿಯೇ ನಿಂತಿದ್ದ ಪೌರ ಕಾರ್ಮಿಕ ಮಹಿಳೆ ಆರೋಪಿ ಕೈಯಲ್ಲಿ ಲಾಂಗ್ ಇದ್ದರೂ, ಹೆದರದೇ ಪೊರಕೆಯಲ್ಲಿ ಹೊಡೆಯಲು ಮುಂದಾಗಿದ್ದಾಳೆ. ಇದರಿಂದ ಭಯಭೀತನಾಗಿ ಆರೋಪಿ ವಾಹನದಲ್ಲಿ ಪರಾರಿಯಾಗಿದ್ದಾನೆ.ಈ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ದೃಶ್ಯವನ್ನು ಆಧರಿಸಿ ಆರೋಪಿ ಸಿದ್ಧಿಕ್  ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!