Thursday, June 4, 2026
Homeತಾಜಾ ಸುದ್ದಿಪ್ರಧಾನಿ ಘೋಷಣೆ ಖಾಲಿ ಪುಟಗಳ ಹೆಡ್ ಲೈನ್ : ಪಿ.ಚಿದಂಬರಂ

ಪ್ರಧಾನಿ ಘೋಷಣೆ ಖಾಲಿ ಪುಟಗಳ ಹೆಡ್ ಲೈನ್ : ಪಿ.ಚಿದಂಬರಂ

- Advertisement -
- Advertisement -

ನವದೆಹಲಿ:ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತದ ನಿರ್ಮಾಣಕ್ಕಾಗಿ 20 ಲಕ್ಷ ಕೋಟಿ ರೂ ವಿಶೇಷ ಪ್ಯಾಕೇಜ್​ ಘೋಷಣೆಯನ್ನು , ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಟೀಕಿಸಿದ್ದಾರೆ.
ಈ ಘೋಷಣೆಯ ಕುರಿತು ಟ್ವೀಟ್ ಮಾಡಿರುವ ಚಿದಂಬರಂ ಪ್ರಧಾನಿ ಹೆಡ್​ಲೈನ್​ ನೀಡಿ, ಪುಟ ಖಾಲಿ ಬಿಟ್ಟಿದ್ದಾರೆ. ಇದೀಗ ಖಾಲಿ ಪುಟವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತುಂಬಲಿದ್ದಾರೆ ಎಂದು ಸರಣಿ ಟ್ವೀಟ್​ ಮೂಲಕ ವ್ಯಂಗ್ಯ ಮಾಡಿದ್ದಾರೆ.

ಈ ಘೋಷಣೆಯ ಪ್ರಯೋಜನ ಯಾರಿಗೆ ಏನು ಸಿಗುತ್ತದೆ ಎಂಬುದನ್ನು ನಾವು ಬಹಳ ಗಂಭೀರವಾಗಿ ಪರಿಶೀಲಿಸುತ್ತೇವೆ? ಮತ್ತು ನಾವು ಮೊದಲನೆಯದಾಗಿ ಬಡವರು, ಹಸಿದ ಮತ್ತು ಕಾಲ್ನಡಿಗೆಯ ಮೂಲಕ ತಮ್ಮ ಹುಟ್ಟೂರು ಸೇರಿರುವ ವಲಸೆ ಕಾರ್ಮಿಕರು ಏನನ್ನು ಪಡೆದುಕೊಳ್ಳಲಿದ್ದಾರೆ ಎಂಬುದನ್ನು ಗಮನಿಸಲಿದ್ದೇವೆ ಎಂದು ಹೇಳಿದರು.
ನಿನ್ನೆರಾತ್ರಿ ತನ್ನ ಭಾಷಣದಲ್ಲಿ ಪ್ರಧಾನಿ ತಾನು ಘೋಷಿಸಿದ ಆರ್ಥಿಕ ಪ್ಯಾಕೇಜ್​ ಯಾವ ರೀತಿಯಾಗಿ ಹಂಚಿಕೆಯಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದ್ದರು.

- Advertisement -

Latest News

error: Content is protected !!