Thursday, June 4, 2026
Homeಕರಾವಳಿಉಳ್ಳಾಲಕ್ಕೆ ಅಪ್ಪಳಿಸಿದ ಕೊರೋನಾ ಸುನಾಮಿ: ಉಳ್ಳಾಲದ ಮಹಿಳೆಗೆ ಕೊರೋನಾ ಸೋಂಕು ದೃಢ

ಉಳ್ಳಾಲಕ್ಕೆ ಅಪ್ಪಳಿಸಿದ ಕೊರೋನಾ ಸುನಾಮಿ: ಉಳ್ಳಾಲದ ಮಹಿಳೆಗೆ ಕೊರೋನಾ ಸೋಂಕು ದೃಢ

- Advertisement -
- Advertisement -

ಮಂಗಳೂರು: ಕೊರೋನಾ ಸುನಾಮಿಯ ಅಟ್ಟಹಾಸ ಸದ್ಯಕ್ಕೆ ಕರಾವಳಿಯಲ್ಲಿ ಶಾಂತವಾದಂತೆ ಕಾಣುತ್ತಿಲ್ಲ. ಇಂದು ಉಳ್ಳಾಲದ ಸೋಮೇಶ್ವರ 38 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢವಾಗಿದೆ.

ಮಂಗಳವಾರದಂದು ರಾಜ್ಯದಲ್ಲಿ ಒಂದೇ ದಿನ ಅತಿ ಹೆಚ್ಚು ಅಂದರೆ 63 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇಂದೂ ಕೂಡಾ ಕೊರೊನಾ ಅಬ್ಬರ ಮುಂದುವರೆದಿದೆ.

ಇಂದು ಒಟ್ಟು 26 ಪ್ರಕರಣಗಳು ವರದಿಯಾಗಿದ್ದು, ಇದರಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 951 ಕ್ಕೆ ಏರಿಕೆಯಾಗಿದೆ. ಕಲಬುರಗಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಬೀದರ್‌ 11, ಹಾಸನದಲ್ಲಿ 4, ಕಲಬುರಗಿಯಲ್ಲಿ 2, ದಾವಣಗೆರೆ 2, ವಿಜಯಪುರ 2, ಉತ್ತರ ಕನ್ನಡ 2 ಹಾಗೂ ದಕ್ಷಿಣ ಕನ್ನಡದಲ್ಲಿ ಓರ್ವನಿಗೆ ಇಂದು ಕೊರೊನಾ ಸೋಂಕು ಕಾಣಿಸಿಕೊಂಡಿದೆ.

- Advertisement -

Latest News

error: Content is protected !!