Wednesday, June 3, 2026
Homeತಾಜಾ ಸುದ್ದಿಆರ್‌ಸಿಬಿ ಮಾಜಿ ಆಟಗಾರ, ಚತ್ತೀಸ್‌ಗಢ ರಣಜಿ ಟೀಂ ನಾಯಕನ ವಿರುದ್ಧ ವಂಚನೆ ಕೇಸ್

ಆರ್‌ಸಿಬಿ ಮಾಜಿ ಆಟಗಾರ, ಚತ್ತೀಸ್‌ಗಢ ರಣಜಿ ಟೀಂ ನಾಯಕನ ವಿರುದ್ಧ ವಂಚನೆ ಕೇಸ್

- Advertisement -
- Advertisement -

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಹಾಗೂ ಚತ್ತೀಸ್‌ಗಢದ ರಣಜಿ ಟ್ರೋಫಿ ತಂಡದ ನಾಯಕ ಹರ್‌ಪ್ರೀತ್ ಸಿಂಗ್ ಭಾಟಿಯಾ ವಿರುದ್ಧವಂಚನೆ ಕೇಸ್ ದಾಖಲಾಗಿದೆ.

ಚತ್ತೀಸ್‌ಗಢದ ಪ್ರಧಾನ ಅಕೌಂಟೆಂಟ್ ಜನರಲ್ ಆಡಿಟ್ ಕಚೇರಿಯಲ್ಲಿ ಕೆಲಸ ಪಡೆದ ಆರೋಪ ಕೇಳಿ ಬಂದಿದೆ.ಈ ಆರೋಪದ ಮೇರೆಗೆ ಈಗ ಛತ್ತೀಸ್‌ಗಢದ ರಣಜಿ ಟ್ರೋಫಿ ತಂಡದ ನಾಯಕ ಹರ್‌ಪ್ರೀತ್ ಸಿಂಗ್ ಭಾಟಿಯಾ ವಿರುದ್ಧ 420 ಕೇಸ್ ದಾಖಲಾಗಿದೆ. ಹರ್‌ಪ್ರೀತ್ ಬುಂದೇಲ್‌ಖಂಡ ವಿಶ್ವವಿದ್ಯಾಲಯದ ಬಿ.ಕಾಂ ಪದವಿ ಪ್ರಮಾಣ ಪತ್ರ ಸಲ್ಲಿಸಿದ್ದರು.

ಈ ಪದವಿ ಸತ್ಯಾಸತ್ಯತೆ ಪರಿಶೀಲಿಸುವಾಗ ವಿಶ್ವವಿದ್ಯಾನಿಲಯ ಅಂತಹ ಯಾವುದೇ ಅಂಕಪಟ್ಟಿ ನೀಡಿಲ್ಲ ಎಂದು ತಿಳಿಸಿದೆ. ಹರ್‌ಪ್ರೀತ್ ವಿರುದ್ಧ ಐಪಿಸಿಯ ಸೆಕ್ಷನ್ 420 (ವಂಚನೆ),467 (ನಕಲಿ) ಅಡಿಯಲ್ಲಿ ಕೇಸ್ ದಾಖಲಾಗಿದೆ.

- Advertisement -

Latest News

error: Content is protected !!