Saturday, June 6, 2026
Homeಕರಾವಳಿಕಡಬ: ಮೈಕ್ ಸಿಕ್ಕಿದ ಖುಷಿಯಲ್ಲಿ ಬೇಕಾಬಿಟ್ಟಿ ಭಾಷಣ ಮಾಡಿದ ದಲಿತ ಮುಖಂಡ: ಸಚಿವ ಎಸ್.ಅಂಗಾರ ವಿರುದ್ಧ ಅಸಭ್ಯ...

ಕಡಬ: ಮೈಕ್ ಸಿಕ್ಕಿದ ಖುಷಿಯಲ್ಲಿ ಬೇಕಾಬಿಟ್ಟಿ ಭಾಷಣ ಮಾಡಿದ ದಲಿತ ಮುಖಂಡ: ಸಚಿವ ಎಸ್.ಅಂಗಾರ ವಿರುದ್ಧ ಅಸಭ್ಯ ಪದ ಬಳಕೆ

- Advertisement -
- Advertisement -

ಕಡಬ: ವಿವಿಧ ದಲಿತ ಸಂಘಟನೆಗಳ  ವತಿಯಿಂದ ಕಡಬದಲ್ಲಿ ಇಂದು ನಕಲಿ ಜಾತಿ ಪ್ರಮಾಣಪತ್ರ ತಡೆಗೆ ಪರಿಶಿಷ್ಟರ ನಡೆ ತಹಶೀಲ್ದಾರ್ ಕಚೇರಿ ಕಡೆಗೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಈ ವೇಳೆ ಭಾಷಣ ಮಾಡುತ್ತಾ ದಲಿಂತ ಮುಖಂಡ ಆನಂದ್ ಮಿತ್ತಬೈಲ್ ಬೇಕಾಬಿಟ್ಟಿ ನಾಲಿಗೆ ಹರಿ ಬಿಟ್ಟಿದ್ದಾರೆ.

ಸಚಿವ, ಶಾಸಕ ಎಸ್.ಅಂಗಾರ ಅವರನ್ನು ಟೀಕಿಸುವ ಭರದಲ್ಲಿ ನಾಲಿಗೆಯ ಹಿಡಿತ ತಪ್ಪಿದ್ದಾರೆ, ಮೊಗೇರ ಸಮುದಾಯಕ್ಕೆ  ಅನ್ಯಾಯವಾಗುತ್ತಿದ್ದರೂ  ಅಂಗಾರರು  ಚಡ್ಡಿಗಳ ಚಡ್ಡಿ ತೊಳೆಯುತಿದ್ರಾ? ಅಸೆಂಬ್ಲಿಯಲ್ಲಿ ಕತ್ತೆ ಮೇಯಿಸ್ತಾ ಇದ್ರಾ  ಎಂದು ತಾನೊಬ್ಬ ಸಚಿವರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬ ಅರಿವೇ ಇಲ್ಲದಂತೆ ಮಾತನಾಡಿದ್ದಾರೆ.

ಆನಂದ್ ಮಿತ್ತಬೈಲ್ ಅವರ ಭಾಷಣ ಕೇಳಿ ಸಂಘಟಕರಿಗೆ ಮುಜುಗರ ಉಂಟಾಗಿದೆ. ಅಲ್ಲದೆ ರಾಜಕೀಯ ಏಕಪಕ್ಷೀಯ  ಭಾಷಣದಿಂದ ಬೇಸತ್ತ ಸಮಾನ ಮನಸ್ಕರು  ಸಭೆಯಿಂದ ಹೊರ ನಡೆದಿದ್ದಾರೆ.

ಅಂಗಾರರು ನಕಲಿ  ಜಾತಿ ಪ್ರಮಾಣಪತ್ರ ಬಗೆಗೆ  ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು  ಎನ್ನುತ್ತಾ ಕರಪತ್ರದಲ್ಲಿ ಹಾಕಿರುವ ಅಂಬೇಡ್ಕರ್ ಭಾವ ಚಿತ್ರಕ್ಕೂ  ಭಾಷಣದಲ್ಲಿ   ವಿರೋಧ ವ್ಯಕ್ತಪಡಿಸಿದ್ದಾರೆ . ಸದ್ಯ ಆನಂದ್ ಮಿತ್ತಬೈಲ್ ಭಾಷಣದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

- Advertisement -

Latest News

error: Content is protected !!