Friday, June 5, 2026
Homeಕರಾವಳಿಮಂಗಳೂರಿನಲ್ಲಿ ರೌಡಿ ಶೀಟರ್ ರಾಹುಲ್ ಕೊಲೆ ಪ್ರಕರಣ : 6 ಅರೋಪಿಗಳ ಬಂಧನ

ಮಂಗಳೂರಿನಲ್ಲಿ ರೌಡಿ ಶೀಟರ್ ರಾಹುಲ್ ಕೊಲೆ ಪ್ರಕರಣ : 6 ಅರೋಪಿಗಳ ಬಂಧನ

- Advertisement -
- Advertisement -

ಮಂಗಳೂರು: ರೌಡಿಶೀಟರ್ ರಾಹುಲ್ ಅಲಿಯಾಸ್ ಕಕ್ಕೆ ರಾಹುಲ್ ಕೊಲೆ ಪ್ರಕರಣದಲ್ಲಿ ಕೊಲೆ ಮಾಡಿದ ನಾಲ್ವರು ಸೇರಿ ಒಟ್ಟು 6 ಜನರನ್ನು ಬಂಧನ ಮಾಡಲಾಗಿದೆ.

ದುಬೈನಿಂದ ವಾಪಾಸಾಗಿದ್ದ ಮಹೇಂದ್ರ ಶೆಟ್ಟಿ, ಅಬುದಾಬಿಯಿಂದ ವಾಪಾಸ್ ಆಗಿದ್ದ ಅಕ್ಷಯ್ ಕುಮಾರ್, ಸುಶಿತ್, ದಿಲ್ಲೇಶ್ ಬಂಗೇರಾ, ಶುಭಂ, ವಿಷ್ಣು ಪಿ. ಬಂಧನಕ್ಕೆ ಒಳಪಟ್ಟವರಾಗಿದ್ದಾರೆ. ಬಂಧಿತರಿಂದ 3 ತಲ್ವಾರ್, 4 ಕತ್ತಿ, 3 ಚೂರಿ, 2 ಸ್ಕೂಟರ್ ಮತ್ತು 5 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಕೊಲೆಯಾದ ರಾಹುಲ್ 2016 ರಲ್ಲಿ ಮಹೇಂದ್ರ ಶೆಟ್ಟಿ ಮೇಲೆ ಅಟ್ಯಾಕ್ ಮಾಡಿದ್ದು, ಅಟ್ಯಾಕ್ ಹಿನ್ನಲೆಯಲ್ಲಿ ಮಹೇಂದ್ರ ಶೆಟ್ಟಿ ದುಬೈಗೆ ಹೋಗಿದ್ದ ಎನ್ನಲಾಗಿದೆ. ಮಾರ್ಚ್ ತಿಂಗಳಿನಲ್ಲಿ ಮಂಗಳೂರಿಗೆ ವಾಪಾಸ್ ಆಗಿ ಸೆಟಲ್ ಆಗಲು ಮಹೇಂದ್ರ ಶೆಟ್ಟಿ ಪ್ಲಾನ್ ಮಾಡಿಕೊಂಡಿದ್ದ ಎಂದು ಹೇಳಲಾಗಿದ್ದು, ವಿದೇಶದಿಂದ ವಾಪಾಸ್ ಬಂದ್ರೆ ಮತ್ತೆ ಅಟ್ಯಾಕ್ ಮಾಡುವುದಾಗಿ ರಾಹುಲ್ ಮಾತನಾಡಿಕೊಂಡಿದ್ದ ಎನ್ನಲಾಗಿದೆ.

ಹಾಗಾಗಿ ರಾಹುಲ್ ಮೇಲೆ ಅಟ್ಯಾಕ್ ಮಾಡಿ ಮಹೇಂದ್ರ ಶೆಟ್ಟಿ ಮತ್ತು ತಂಡ ಕೊಲೆ ಮಾಡಿದೆ ಎಂದು ಆರೋಪಿಸಲಾಗಿದೆ.

- Advertisement -

Latest News

error: Content is protected !!