Sunday, June 7, 2026
Homeಕರಾವಳಿಹಿರಿಯಡ್ಕದ ಮನೆಯೊಂದರಲ್ಲಿ ಕೊಲೆಯಾದ ಸ್ಥಿತಿಯಲ್ಲಿ ತಾಯಿ ಮಗಳ ಶವ ಪತ್ತೆ

ಹಿರಿಯಡ್ಕದ ಮನೆಯೊಂದರಲ್ಲಿ ಕೊಲೆಯಾದ ಸ್ಥಿತಿಯಲ್ಲಿ ತಾಯಿ ಮಗಳ ಶವ ಪತ್ತೆ

- Advertisement -
- Advertisement -

ಹೆಬ್ರಿ : ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಮದಗ ಅಂಗನವಾಡಿ ಬಳಿ ಇರುವ ಮನೆಯೊಂದರಲ್ಲಿ ತಾಯಿ ಮಗಳ ಶವ ಪತ್ತೆಯಾಗಿದ್ದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.


ತಾಯಿ ಚೆಲುವಿ(30) ಮಗಳು ಪ್ರಿಯಾ (10) ಕೊಲೆಯಾದವರು.
ರಾತ್ರಿ ಸಮಯದಲ್ಲಿ ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು ಮುಂಜಾನೆ ಸ್ಥಳೀಯರ ಮಾಹಿತಿ ಮೇರೆಗೆ ಹಿರಿಯಡಕ ಪೊಲೀಸರು ಸ್ಥಳ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.


ಯಾಕೆ ಯಾರು ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಇನ್ನು ತಿಳಿದು ಬರಬೇಕಾಗಿದೆ. 7 ವರ್ಷದ ಹಿಂದೆ ತನ್ನ ಪತಿ ಬಿಟ್ಟಿರುವುದಾಗಿ ಎನ್ನಲಾಗುತ್ತಿದ್ದು, ಕೊಲೆಯಾದ ಮಹಿಳೆ ಆಸ್ಪತ್ರೆಯೊಂದರಲ್ಲಿ ಹೌಸ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದೆ .

- Advertisement -

Latest News

error: Content is protected !!