Sunday, June 7, 2026
Homeಕರಾವಳಿಉಡುಪಿಕಾರ್ಕಳ: ಶಾಲಾ ಪ್ರವಾಸದ ಟೆಂಪೋ ಟ್ರಾವೆಲರ್ ಪಲ್ಟಿ: ಬಾಲಕ‌ ಸಾವು

ಕಾರ್ಕಳ: ಶಾಲಾ ಪ್ರವಾಸದ ಟೆಂಪೋ ಟ್ರಾವೆಲರ್ ಪಲ್ಟಿ: ಬಾಲಕ‌ ಸಾವು

- Advertisement -
- Advertisement -

ಕಾರ್ಕಳ: ಶಾಲಾ ಪ್ರವಾಸಕ್ಕೆಂದು ಉಡುಪಿ ಕಡೆಗೆ ಬರುತ್ತಿದ್ದ ಟೆಂಪೋ ಟ್ರಾವೆಲರ್ ಉರುಳಿಬಿದ್ದು ಶಾಲಾ ಬಾಲಕನೋರ್ವ ಸ್ಥಳದಲ್ಲೇ ಅಸುನೀಗಿದ ಘಟನೆ ಕುದುರೆಮುಖ-ಮಾಳ ರಾಷ್ಟ್ರೀಯ ಹೆದ್ದಾರಿ ಎಸ್ ಕೆ ಬಾರ್ಡರ್ ಬಳಿ ನಿನ್ನೆ ಸಂಜೆ ಸಂಭವಿಸಿದೆ.ಧಾರಾವಾಡದ ಹೇಮಂತ್ ಮೃತ ಬಾಲಕ ಎಂದು ಗುರುತಿಸಲಾಗಿದೆ.

ಶಾಲಾ ಪ್ರವಾಸದ ಟೆಂಪೋ ಟ್ರಾವೆಲರ್ ಉಡುಪಿ ಕಡೆ ಬರುತ್ತಿತ್ತು. ಟೆಂಪೋ ಕುದುರೆಮುಖ‌ ಘಾಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಹಲವಾರು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು,ಅವರನ್ನು ಕಾರ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!